ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಹಿನ್ನೆಲೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮುಖ್ಯಸ್ಥ ಎಸ್. ಸೋಮನಾಥ್ (S.Somanath)ಅವರಿಗೆ ಪುಟ್ಟ ಪೋರನೋರ್ವ ವಿಕ್ರಂ ಲ್ಯಾಂಡರ್ (Vikram Lander) ಮಾದರಿಯನ್ನು ಗಿಫ್ಟ್ (Gift) ಕೊಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ಈ ಚಿತ್ರ ಎಲ್ಲರ ಮನಗೆದ್ದಿದೆ.ಆಗಸ್ಟ್ 23ರಂದು ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದ್ದು, ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ದಿನ ಅದಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಕೀರ್ತಿ ಭಾರತಕ್ಕೆ ಸಂದಿದೆ. ಇಸ್ರೋ ವಿಜ್ಞಾನಿಗಳ ಈ ಅಭೂತಪೂರ್ವ ಕಾರ್ಯಕ್ಕೆ ಗಣ್ಯಾತಿಗಣ್ಯರಿಂದ ಹಿಡಿದು ಇಡೀ ವಿಶ್ವವೇ ಅಭಿನಂದನೆ ಸಲ್ಲಿಸಿತ್ತು. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂISRO Chief Sri Somanath today had a surprise visitor,A young neighbour boy has handed over own made Vikram Lander model to the ISRO chief on behalf of all the neighbours. pic.twitter.com/BcyHYO0pDW— Dr. P V Venkitakrishnan (@DrPVVenkitakri1) September 2, 2023ಅದೇ ರೀತಿ ಈ ಪುಟ್ಟ ಬಾಲಕ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿಕ್ರಂ ಲ್ಯಾಂಡರ್‌ನ ಮಾದರಿಯನ್ನು ರಚಿಸಿದ್ದು, ಎಲ್ಲರ ಪರವಾಗಿ ಇಸ್ರೋ ಅಧ್ಯಕ್ಷರಿಗೆ ನೀಡಿದ್ದಾನೆ. ಇಸ್ರೋ ವಿಜ್ಞಾನಿ ಪಿವಿ ವೆಂಕಟಕೃಷ್ಣನ್ ಅವರು ಟ್ವಿಟ್ಟರ್‌ನಲ್ಲಿ ಈ ಸುಂದರ ಕ್ಷಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಬಾಲಕ ಎಸ್ ಸೋಮನಾಥ್ ಅವರಿಗೆ ಗಿಫ್ಟ್ ನೀಡುತ್ತಿರುವ ಚಿತ್ರವನ್ನು ಸಹಾ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಆರೋಪ- ತೆಲಂಗಾಣ ಕಾಂಗ್ರೆಸ್ ನಾಯಕನಿಗೆ ನೋಟಿಸ್ಸೆ.2ರಂದು ಇಸ್ರೋ ತನ್ನ ಸೌರ ಮಿಷನ್ ಆದಿತ್ಯ ಎಲ್-1 ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಮಿಷನ್ ಇದಾಗಿದೆ. ಈ ಸೋಲಾರ್ ಮಿಷನ್‌ಗೆ ಸುಮಾರು 300 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ: ಎಂ.ಕೆ ಸ್ಟಾಲಿನ್ ಪುತ್ರನಿಂದ ವಿವಾದಾತ್ಮಕ ಹೇಳಿಕೆWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


