ಮೈಸೂರು: ಮೈಸೂರು ಮಹಾನಗರ ಪಾಲಿಕೆ (Mysuru City Corporation) ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಸಿಎಂ ಸಿದ್ದರಾಮಯ್ಯ (Siddaramaiah) ಶಾಕ್ ಕೊಟ್ಟಿದ್ದಾರೆ. ಬಿಜೆಪಿ ಮೇಯರ್ ತಮ್ಮ ಕೊನೆಯ ಕೌನ್ಸಿಲ್ ಸಭೆ ನಡೆಸದಂತೆ ಸಿಎಂ‌‌ ಮಾಸ್ಟರ್ ಪ್ಲಾನ್ ಮಾಡಿ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.ಮೊನ್ನೆಯಷ್ಟೆ ಮೈಸೂರಿಗೆ (Mysuru) ಬಂದಾಗ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಭೇಟಿ ಮಾಡಿ ಸಭೆ ನಡೆಸಿದ್ದ‌ರು. ಈ ಸಭೆಯಲ್ಲಿ ಪಾಲಿಕೆ ಆಯುಕ್ತ, ನಗರಾಭಿವೃದ್ಧಿ ಸಚಿವರು ಕೂಡ ಭಾಗಿಯಾಗಿದ್ದರು. ಜೆಡಿಎಸ್ ಸಹಾಯದಿಂದ ಮೇಯರ್ ಸ್ಥಾನದಲ್ಲಿರುವ ಬಿಜೆಪಿ ಅಧಿಕಾರ ಅವಧಿ ಇದೇ ತಿಂಗಳು 5 ರಂದು ಮುಕ್ತಾಯವಾಗಲಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು – KRS ಡ್ಯಾಂನಲ್ಲಿ 5 ದಿನಕ್ಕೆ 2 TMC ನೀರು ಖಾಲಿಕೊನೆಯ ಕೌನ್ಸಿಲ್ ಸಭೆಯಲ್ಲಿ ಗ್ರೇಟರ್ ಮೈಸೂರು, ಪೆರಿಪೆರಿ ರಿಂಗ್ ರಸ್ತೆ ಸೇರಿದಂತೆ ಅನೇಕ ವಿಚಾರಗಳನ್ನ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಪ್ಲಾನ್ ಮಾಡಿತ್ತು. ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ಲಾನ್ ಮಾಡಿತ್ತು. ಇದೇ ತಿಂಗಳು 1 ರಂದು ನಡೆಸಬೇಕಿದ್ದ‌ ಕೌನ್ಸಿಲ್ ಸಭೆಯನ್ನೇ ಪಾಲಿಕೆ ಆಯುಕ್ತರು ರದ್ದು ಮಾಡಿದ್ದಾರೆ.ಅಂದೇ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಪಾಲಿಕೆ ಎಲ್ಲಾ ಅಧಿಕಾರಿಗಳ ಸಭೆ ಆಯೋಜಿಸಿ ಕೌನ್ಸಿಲ್ ಸಭೆ ರದ್ದಾಗುವಂತೆ ಪ್ಲಾನ್ ಮಾಡಿದ್ದರು. ಸದ್ಯ ಸರ್ಕಾರದ ನಡೆ ಬಗ್ಗೆ ಬಿಜೆಪಿ‌ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬೆಳಗಾವಿ ಸಚಿವರ ಮಧ್ಯೆ ಶೀತಲ ಸಮರ – ಮಕ್ಕಳಿಗೆ ಎಂಪಿ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್-ಜಾರಕಿಹೊಳಿ ಫೈಟ್Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


