ಬೆಂಗಳೂರು: ನಾನು 5 ಬಾರಿ ಮರುಜನ್ಮ ಪಡೆದಿದ್ದೇನೆ, ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ಇವತ್ತು ನಿಮ್ಮ ಜೊತೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆಘಾತಕಾರಿ ಅನುಭವಗಳನ್ನ ಹಂಚಿಕೊಂಡಿದ್ದಾರೆ.ಪಾರ್ಶ್ವವಾಯು (Stroke) ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ (Hospital) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ, ನನಗೆ ಪುನರ್ಜನ್ಮ ಬಂದಿದೆ. ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.ಅಂದು ರಾತ್ರಿ 2 ಗಂಟೆ ವೇಳೆಗೆ ನನಗೆ ಎಚ್ಚರವಾಯ್ತು, ತಕ್ಷಣ ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ ಇಪ್ಪತ್ತೇ ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಆಕ್ಷಣದಲ್ಲಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳಮುಂದುವರಿದು.. ನಾನಿಂದು ರಾಜಕೀಯ ಬಿಟ್ಟು ಕೆಲ ಮಾತನ್ನ ಮಾತನಾಡಬೇಕಿದೆ, ನನಗಾದ ಜೀವನ್ಮರಣದ ಹೋರಾಟದ ಬಗ್ಗೆ ಹೇಳಬೇಕಿದೆ. ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ, ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್‌ನಲ್ಲಿ ನಾವು ಚಿಕಿತ್ಸೆ ಪಡೆಯದೇ ಇದ್ರೇ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.ರಾಜ್ಯದ ಸಾವಿರಾರು ಕುಟುಂಬಗಳ ಆಶೀರ್ವಾದ, ಪ್ರಾರ್ಥನೆಯಿಂದ ನಾನು ಮತ್ತೆ ಬಂದಿದ್ದೇನೆ, ವೈದ್ಯರು ನನಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ದಿನಚರಿ ಬದಲಾಗಲಿದೆ. ನನ್ನ ಜೀವನದ ಬಗ್ಗೆ ಸ್ವಲ್ಪ ಕನಿಕರದಿಂದ ನೀವೆಲ್ಲ ನೋಡಿ. ಮೊದಲ ರೀತಿ ನಿಮಗೆ ಸಿಗುವುದು ಕಷ್ಟವಾಗಬಹುದು. ನೀವು ನನ್ನ ಆರೋಗ್ಯ ಸ್ಥಿತಿ ಅರ್ಥ ಮಾಡಿಕೊಳ್ಳಿ. ನನ್ನ ಜೀವನ ಶೈಲಿ ಬದಲಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ, ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ5 ಬಾರಿ ಮರುಜನ್ಮ ಪಡೆದಿರುವೆ: 5 ಬಾರಿ ನಾನು ಮರುಜನ್ಮ ಪಡೆದಿದ್ದೇನೆ, ಅದಕ್ಕೆ ಕಾರಣ ವೈದ್ಯರು. ನಾನು ಅಂದು ಸ್ವಲ್ಪ ತಡ ಮಾಡಿದ್ರೂ ಈ ರೀತಿ ನಿಮ್ಮ ಜೊತೆ ಮಾತನಾಡಲು ಆಗ್ತಿರಲಿಲ್ಲ. ನಾನು ಬಿಡದಿಯಿಂದ ಬಂದ ಕೂಡಲೇ ವೈದ್ಯ‌ರೆಲ್ಲ ಬಂದಿದ್ರು ಬಂದ ಕೂಡಲೇ ಚಿಕಿತ್ಸೆ ಶುರು ಮಾಡಿದ್ರು. ನನ್ನ ಅದೃಷ್ಟ ಎಲ್ಲಾ ವೈದ್ಯರು ಆಸ್ಪತ್ರೆಗೆ ಬರುವಂತಾಯ್ತು, ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಾದವನನ್ನ ಒಂದು ಗಂಟೆಯಲ್ಲೇ ಮೊದಲಿನ ಸ್ಥಿತಿಗೆ ಬರುವಂತೆ ಮಾಡಿದರು ಎಂದು ತಿಳಿಸಿದ್ದಾರೆ.ಇದು ನನಗೆ 2ನೇ ಬಾರಿ ಪಾರ್ಶ್ವವಾಯು ಆಗಿರೋದು. ಈ ಹಿಂದೆ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಸುದ್ದಿ ನೋಡ್ತಾ ಕುಳಿತಿದ್ದೆ. ಆಗ ನಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ. ಆಗ ಮೊದಲ ಬಾರಿ ಸ್ಟ್ರೋಕ್ ಆಗಿತ್ತು, ಇದು 2ನೇ ಬಾರಿ. ನಾನು ಬೆಳಗ್ಗೆ ಹೋದ್ರೆ ಆಯ್ತು ಅಂತಾ ನಿರ್ಲಕ್ಷ್ಯ ಮಾಡಿದ್ದರೆ ಲೈಫ್‌ಟೈಂ ಹಾಸಿಗೆ ಹಿಡಿಯುತ್ತಿದ್ದೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.ನಮ್ಮ ರಾಜ್ಯದಲ್ಲಿ ಪರಿಣತ ವೈದ್ಯರಿದ್ದಾರೆ, ಜೀವದ ಮುಂದೆ ಹಣ ಮುಖ್ಯವಲ್ಲ. ಯಾವುದೇ ಕಾರಣಕ್ಕೂ ತಡ ಮಾಡದೇ ಈ ರೀತಿ ಸಮಸ್ಯೆಯಾದಾಗ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


