– ಬಸವ ದಾನ ನೀಡಿ ಹರಕೆ ಸಲ್ಲಿಕೆರಾಮನಗರ: ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ (Dr Manjunath) ಗೆಲುವು ಸಾಧಿಸಿದ ಹಿನ್ನೆಲೆ ಪತ್ನಿ ಅನುಸೂಯ ಮಂಜುನಾಥ್ (Anusuya Manjunath) ಗ್ರಾಮಸ್ಥರ ಹರಕೆ ತೀರಿಸಿದ್ದಾರೆ. ಕನಕಪುರ (Kanakapura) ತಾಲೂಕಿನ ಚೀರಣಕುಪ್ಪೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅನುಸೂಯ, ಗ್ರಾಮಸ್ಥರ ಜೊತೆ ಸೇರಿ ಹರಕೆ ತೀರಿಸಿದರು.ಬೆಂಗಳೂರು (Bengaluru) ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಸಾಧಿಸಿದರೆ ಗ್ರಾಮದ ದೇವಾಲಯಕ್ಕೆ ಬಸವ ದಾನ ನೀಡುವುದಾಗಿ ಗ್ರಾಮಸ್ಥರು ಹರಕೆ ಕಟ್ಟಿಕೊಂಡಿದ್ದರು. ಬಳಿಕ ಚುನಾವಣೆಯಲ್ಲಿ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆ ಇಂದು ಗ್ರಾಮಕ್ಕೆ ಆಗಮಿಸಿದ ಅನಸೂಯಾ ಮಂಜುನಾಥ್, ದೇವಾಲಯಕ್ಕೆ ಬಸವನ ದಾನ ಮಾಡಿದ್ದಾರೆ.  ಇದನ್ನೂ ಓದಿ: ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ: ಶರದ್ ಪವಾರ್ಗ್ರಾಮಸ್ಥರ ಜೊತೆ ಸೇರಿ ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಅನುಸೂಯ ಮಂಜುನಾಥ್ ಜೊತೆಗೆ ಸ್ಥಳೀಯ ಬಿಜೆಪಿ-ಜೆಡಿಎಸ್ (BJP-JDS) ಮುಖಂಡರು ಸಾಥ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಹಡಗು, ಸಿದ್ದರಾಮಯ್ಯ ರಾಜೀನಾಮೆ ಖಚಿತ – ಬಿಜೆಪಿ ನಾಯಕರ ವಾಗ್ದಾಳಿ






 Advertisement 




Sign in to your account
Username or Email Address


Password

 Remember Me


