-`ಕೈ’ನ ಆರು ಸದಸ್ಯರ ಗೈರು, ಪಕ್ಷೇತರರಿಗೆ `ಜೈ’ ಎಂದ ಬಿಜೆಪಿಹಾವೇರಿ: ಹಾವೇರಿ (Haveri) ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು. ಕಾಂಗ್ರೆಸ್ (Congress) ಬಹುಮತ ಇದ್ದರೂ, 6 ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಬಿಜೆಪಿ (BJP) ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.ಹಾವೇರಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ಕೈ ಎತ್ತುವ ಮೂಲಕ ಬಹುಮತದ ಆಧಾರದ ಮೇಲೆ ಚುನಾಯಿತರಾದರು. ಮತದಾನದ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಪಟಾಕಿ ಸಿಡಿಸಿ, ಶಿಳ್ಳೆ, ಕೇಕೇಗಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇದನ್ನೂ ಓದಿ: 231 ಸಾಕ್ಷಿ ಕೇಳಿ ಜೈಲಿನಲ್ಲಿ ದರ್ಶನ್‌ ಶಾಕ್‌!ಈ ಎರಡೂ ಸ್ಥಾನಗಳಿಗೆ ಇತ್ತೀಚೆಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸರ್ಕಾರ ಮೀಸಲಾತಿ ನಿಗದಿ ಮಾಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಪಕ್ಷೇತರರೇ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಬಿ’ವರ್ಗಕ್ಕೆ ಮೀಸಲಾಗಿತ್ತು. ಇದನ್ನೂ ಓದಿ: ಪ್ರವಾಹ ತಡೆಯಲು ವಿಫಲ – ಉತ್ತರ ಕೊರಿಯಾದಲ್ಲಿ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ 13 ಜನ, ಬಿಜೆಪಿ ಬೆಂಬಲಿತ 9 ಜನ ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿ ಒಟ್ಟು 34 ಮತಗಳಿದ್ದವು. ಈ ಪೈಕಿ ಶಾಸಕ ರುದ್ರಪ್ಪ ಲಮಾಣಿ ಮತ್ತು ಎಂಎಲ್‌ಸಿ ಸಲೀಂ ಅಹ್ಮದ್ ಕಾಂಗ್ರೆಸ್‌ನವರಾದರೆ, ಸಂಸದ ಬಸವರಾಜ ಬೊಮ್ಮಾಯಿ ಕಮಲ ಪಕ್ಷದವರು. ಇದನ್ನೂ ಓದಿ: ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತಗಳನ್ನು ಮಾರಾಟಕ್ಕಿಟ್ಟಿಲ್ಲ: ನಿಖಿಲ್ಪಕ್ಷಗಳ ಬಲಾ ಬಲ ನೋಡಿದಲ್ಲಿ 10 ಬಿಜೆಪಿ, 15 ಕಾಂಗ್ರೆಸ್ ಮತ್ತು 7 ಸ್ಥಾನಗಳಲ್ಲಿ ಪಕ್ಷೇತರರು ಇದ್ದು, ಪಕ್ಷೇತರರೇ ನಿರ್ಣಾಯಕರಾಗಿದ್ದರು. ಆದರೆ ಕಾಂಗ್ರೆಸ್‌ನ 6 ಜನ ಸದಸ್ಯರು ಚುನಾವಣೆಗೆ ಗೈರಾಗುವ ಮೂಲಕ ನಿರಾಯಾಸವಾಗಿ ಗೆಲುವನ್ನು `ಬಿಜೆಪಿ ಬೆಂಬಲಿತ’ರಿಗೆ ನೀಡಿದಂತಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕೈ ಪರವಾಗಿ ರೇಣುಕಾ ರವಿ ಪುತ್ರನ್ ಹಾಗೂ ಬಿಜೆಪಿ ಬೆಂಬಲಿತ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪೂಜಾ ಬಸಯ್ಯ ಹಿರೇಮಠ ಮತ್ತು ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಸಾತೇನಹಳ್ಳಿ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಇಲ್ಲ: ಹಿಮಾಚಲ ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರಈ ಪೈಕಿ ರೇಣುಕಾ ರವಿ ಪುತ್ರನ್ ಕೇವಲ 11 ಮತಗಳಿಸಿದರೆ, ಬಿಜೆಪಿ ಬೆಂಬಲಿತ ಶಶಿಕಲಾ ರಾಮು ಮಾಳಗಿ 17 ಮತಗಳನ್ನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪೂಜಾ ಬಸಯ್ಯ ಹಿರೇಮಠ 11 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಸಾತೇನಹಳ್ಳಿ 17 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಇದನ್ನೂ ಓದಿ: ಮಾಜಿ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ಒಟ್ಟು 24 ಮತದಾರರ ಪೈಕಿ ಕಾಂಗ್ರೆಸ್‌ನ 6 ಜನರು ಗೈರಾಗಿದ್ದರು. ಒಟ್ಟು 28 ಸದಸ್ಯರು ಹಾಜರಿದ್ದ ಹಿನ್ನೆಲೆಯಲ್ಲಿ ಬಹುಮತಕ್ಕೆ 15 ಮತಗಳನ್ನು ಪಡೆಯಬೇಕಿತ್ತು. ಆದರೆ ಬಿಜೆಪಿ ಬೆಂಬಲಿತರು 17 ಮತಗಳನ್ನು ಗಳಿಸುವ ಮೂಲಕ ಗೆಲುವು ಪಡೆದರು. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಭರ್ಜರಿ ಗೆಲುವು – ಗ್ರಾಮಸ್ಥರ ಹರಕೆ ತೀರಿಸಿದ ಅನುಸೂಯ ಮಂಜುನಾಥ್Sign in to your account
Username or Email Address


Password

 Remember Me


