– 1935 ರಲ್ಲೇ ಜಮೀನು ತೆಗೆದುಕೊಳ್ಳಲಾಗಿದೆ
– ಸಿಎಂ ಪರ ಜಮೀರ್‌ ಬ್ಯಾಟಿಂಗ್‌ಧಾರವಾಡ: ಮುಖ್ಯಮಂತ್ರಿ (Chief Minister) ಆಗಲು ಯಾರಿಗೆ ಆಸೆ ಇರೋದಿಲ್ಲ ಹೇಳಿ? ಎಲ್ಲರಿಗೂ ಆ ಆಸೆ ಇದ್ದೇ ಇರುತ್ತದೆ. ನನಗೂ ಕೂಡ ಆ ಆಸೆ ಇದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed) ಹೇಳಿದ್ದಾರೆ.ಧಾರವಾಡದಲ್ಲಿ ಮಾತನಾಡಿದ ಅವರು, ಆರ್.ವಿ.ದೇಶಪಾಂಡೆ (RV Deshpande) ಅವರು ಹಿರಿಯರು, 8-9 ಬಾರಿ ಶಾಸಕರಾದವರು, ಅವರೂ ಒಮ್ಮೆ ಸಿಎಂ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಆ ರೀತಿ ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ನನಗೂ ಕೂಡ ಸಿಎಂ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಆ ಆಸೆ ಇದ್ದೇ ಇರುತ್ತದೆ‌. ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಜಮೀರ್ ಹೇಳಿದರು. ಇದನ್ನೂ ಓದಿ: ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ ಸಿಎಂ ಅವರು ಪದೇ ಪದೇ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಮೀರ್, ನಾನೂ ಸಹ ಅನೇಕ ಬಾರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೇನೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುತ್ತಾರೆ. ಅಲ್ಲಿಗೂ ನಾನು ಹೋಗಿದ್ದೇನೆ ಏನಾದರೂ ಆಗಿದೆಯಾ ಎಂದು ಪ್ರಶ್ನಿಸಿದರು.ಮುಡಾ (MUDA Scam) ವಿಚಾರದಲ್ಲಿ ಸಿಎಂ ಪಾತ್ರ ಏನೂ ಇಲ್ಲ, ಅದು ಎಚ್‌ಡಿ ಕುಮಾರಸ್ವಾಮಿಗೂ (HD Kumaraswamy) ಗೊತ್ತು. ಹೀಗಾಗಿ ಅವರು ಮೊದಲು ಬಿಜೆಪಿ (BJP) ಪಾದಯಾತ್ರೆಗೆ ಹೋಗುವುದಿಲ್ಲ ಎಂದಿದ್ದರು. ಬಿಜೆಪಿ ಹೈಕಮಾಂಡ್ ಹೇಳಿದ್ದಕ್ಕೆ ಪಾದಯಾತ್ರೆಗೆ ಹೋಗಿದ್ದರು, ಪ್ರಾಸಿಕ್ಯೂಷನ್ ಕೇಸ್‌ನಲ್ಲಿ ಏನೂ ಆಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 2 ತಿಂಗಳ ಒಳಗಡೆ ಕೆಪಿಎಸ್‌ಸಿ ಮರು ಪರೀಕ್ಷೆ – ಅಧಿಕಾರಿಗಳು ಅಮಾನತು: ಸಿಎಂ ಘೋಷಣೆ ರಾಜ್ಯಪಾಲರ ವಕೀಲರು ಸಿದ್ದರಾಮಯ್ಯ (Siddaramaiah) ಬೇನಾಮಿ ಆಸ್ತಿ ಮಾಡಿದ್ದಾರೆ ಎನ್ನುವಂತೆ ವಾದ ಮಾಡಿದ್ದಾರೆ, ಅದರಲ್ಲಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲ. 1935ರಲ್ಲೇ ಈ ಜಮೀನು ತೆಗೆದುಕೊಳ್ಳಲಾಗಿದೆ, ಲಿಂಗ ಎನ್ನುವವರು ಜಮೀನು ತೆಗೆದುಕೊಂಡಿದ್ದರು. ಆ ನಂತರ ದೇವರಾಜ್ ಎಂಬುವವರ ಪಾಲು ಬರುತ್ತದೆ. 2004 ರಲ್ಲಿ ಸಿದ್ದರಾಮಯ್ಯ ಅವರ ಬಾಮೈದುನನಿಗೆ ಕೊಡಲಾಗುತ್ತದೆ. ಆ ಬಳಿಕ ಅವರು ತಮ್ಮ ಅಕ್ಕನಿಗೆ ಗಿಫ್ಟ್ ಕೊಟ್ಟಿದ್ದಾರೆ. ಅದನ್ನು ಸೈಟ್ ಮಾಡಿದ್ದಾರೆ. ಆದರೆ ಸಿಎಂ ಅವರು ಎಲ್ಲೂ ಸೈಟ್ ಕೊಡಿ ಎಂದು ಪತ್ರ ಬರೆದಿಲ್ಲ ಎಂದರು.ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಇಲ್ಲ. ಈಗ ಸಿಎಂ ಖುರ್ಚಿ ಖಾಲಿ ಇಲ್ಲ. ಎಲ್ಲೂ ಸಿಎಂ ಬದಲಾವಣೆ ಮಾಡುವ ವಿಷಯವೇ ಪ್ರಸ್ತಾಪ ಆಗಿಲ್ಲ. ಬಿಜೆಪಿ ಅವಧಿಯಲ್ಲಿನ ಕೇವಲ ಕೋವಿಡ್ ಹಗರಣ ಮಾತ್ರವಲ್ಲ. ಬಹಳಷ್ಟು ಹಗರಣಗಳಿವೆ. ನಾವು ಸುಮ್ಮನೆ ಕುಳಿತದ್ದೇ ತಪ್ಪು. ಅವುಗಳನ್ನೆಲ್ಲ ತೆಗೆಯುತ್ತೇವೆ. ದ್ವೇಷದ ರಾಜಕಾರಣ ಮಾಡಿದವರು ಯಾರು? ಸಿದ್ದರಾಮಯ್ಯ ಎಂದೂ ಭಯ ಬೀಳುವುದಿಲ್ಲ. ಅವರು ಟಗರು ಇದ್ದಂತೆ ಎಂದರು.
Sign in to your account
Username or Email Address


Password

 Remember Me


