ಬೆಳಗಾವಿ: ಒಂದು ಕುಟುಂಬದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ದುಬೈನ (Dubai) ಓಮಾನ್‌ನಲ್ಲಿ (Oman) ನಡೆದಿದೆ.ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ನಿವಾಸಿಗಳಾದ ಪವನಕುಮಾರ್ ತಹಶಿಲ್ದಾರ, ಪೂಜಾ, ವಿಜಯಾ, ಆದಿಶೇಷ ಮೃತಪಟ್ಟವರು.ಇದನ್ನೂ ಓದಿ: ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ
ದುಬೈಗೆ ತಾಯಿ, ಇಬ್ಬರು ಮಕ್ಕಳು ಹಾಗೂ ಅಳಿಯನೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲೇ ನಾಲ್ವರು ಸಜೀವ ದಹನಗೊಂಡಿದ್ದಾರೆ.ಮೃತದೇಹಗಳನ್ನು ಭಾರತಕ್ಕೆ ತರಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತುಕತೆ ನಡೆಸುತ್ತಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಹಾಗೂ ಪ್ರಹ್ಲಾದ್ ಜೋಶಿಗೆ (Pralhad Joshi) ಮನವಿ ಸಲ್ಲಿಸಿದ್ದಾರೆ.ಇದನ್ನೂ ಓದಿ: ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ- ರೌಡಿಶೀಟರ್ ಕಾಲಿಗೆ ಪಿಎಸ್‌ಐ ಗುಂಡೇಟುSign in to your account
Username or Email Address


Password

 Remember Me


