ಹಾಸನ: ದೇಶದಲ್ಲಿ ದರ್ಶನ್‍ದ್ದು (Darshan) ಒಂದೇ ವಿಚಾರ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ತೋರಿಸ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಅದಕ್ಕಿಂತ ಒಳ್ಳೆಯದನ್ನ ತೋರಿಸಿ ಎಂದು ಮಾಧ್ಯಮಗಳ ಮೇಲೆ ಸಚಿವ ಕೆ.ಎನ್.ರಾಜಣ್ಣ (K.N Rajanna) ಗರಂ ಆಗಿದ್ದಾರೆ.ಹಾಸನದಲ್ಲಿ (Hassan) ಸುದ್ದಿಗಾರರು ದರ್ಶನ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಬರೀ ಅವನದ್ದೇ ತೋರಿಸುತ್ತೀರಿ. ಟಿವಿಯವರಿಗೆ ಬೇರೆ ಕೆಲಸ ಇಲ್ವಾ? ಒಳ್ಳೆಯ ಕಲಾವಿದ ಎಂದು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಎಂದ ಮಾತ್ರಕ್ಕೆ ಮಾಡಬಾರದ್ದನ್ನು ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ಏನು ಮಾಹಿತಿ ಇಲ್ಲ ಎಂದು ತೋರಿಸುತ್ತಾ ಇದ್ರೆ ನೋಡಲು ಅಸಹ್ಯ ಆಗುತ್ತೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.ಹೇಮಾವತಿ ನದಿಗೆ ಬಾಗಿನ ಅರ್ಪಿಸುವ ವಿಚಾರವಾಗಿ ಮುಖ್ಯಮಂತ್ರಿಗಳ (CM Siddaramaiah) ಬಳಿ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟ ಕೂಡಲೇ ಬಾಗಿನ ಅರ್ಪಿಸುತ್ತೇವೆ. ಹವಾಮಾನ ಸರಿ ಇಲ್ಲ. ಹೆಲಿಕಾಪ್ಟರ್‌ನಲ್ಲಿ ಓಡಾಡಲ್ಲ ಎಂದಿದ್ದಾರೆ. ಇವತ್ತು ಕೇಸ್ ಇದೆಯಲ್ಲ ಅವರು ಟೆನ್ಷನ್‍ನಲ್ಲಿ ಇರ್ತಾರೆ. ಇಂದು ಸಂಜೆ ಭೇಟಿ ಮಾಡಿ ದಿನಾಂಕ ನಿಗದಿ ಮಾಡ್ತೀವಿ ಎಂದಿದ್ದಾರೆ.ಮುಂಬಡ್ತಿ ಸಿಗುತ್ತದೆ ಎಂಬ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ ವಿಚಾರವಾಗಿ, ಅದರ ಬಗ್ಗೆ ಅವರನ್ನೇ ಕೇಳಿ. ಕಾಂಗ್ರೆಸ್ ಪಕ್ಷ ಎಂದರೆ ಹೈಕಮಾಂಡ್‍ನಿಂದ ನಿರ್ದೇಶನಗೊಳ್ಳುವ ಪಕ್ಷ. ರಾಹುಲ್‍ಗಾಂಧಿಯವರು ಅವರಿಗೆ ಬಡ್ತಿ ಕೊಡ್ತಿನಿ ಅಂದರೆ ನಾವು ತಪ್ಪಿಸಲು ಆಗುತ್ತಾ? ಬಡ್ತಿ ಇರಬಹುದು, ಯಾವುದೇ ಇರಬಹುದು ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಂಪುಟ ಪುನರ್‍ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.ಸಿಎಂ ವಿರುದ್ಧದ ಮುಡಾ ಪ್ರಕರಣದ (MUDA Case) ತೀರ್ಪಿನ ವಿಚಾರವಾಗಿ, ಅವರ ಪರ ವಕೀಲರು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ. ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯ 3 ಗಂಟೆಗೆ ವಿಚಾರಣೆಗೆ ತೆಗೆದುಕೊಳ್ಳಬಹುದು. ಇಂದೇ ತೀರ್ಪು ಬರಲ್ಲ, ಇನ್ನೂ ಸಮಯ ತೆಗೆದುಕೊಳ್ಳಲಿದೆ ಎಂಬ ಊಹೆ ನನ್ನದು ಎಂದು ಅವರು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


