ಚಿಕ್ಕಬಳ್ಳಾಪುರ: ಟಿಟಿ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ (Road Accident) ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ನಡೆದಿದೆ.ಕಾರಿನಲ್ಲಿದ್ದ ಮಗ ಶ್ರೀಕಾಂತ್ ಈತನ ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೂವರು ಸಹ ದಾರುಣ ಸಾವನ್ನಪ್ಪಿದ್ದಾರೆ. ಇನ್ನೂ ಟಿಟಿ ವಾಹನದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸಿಎಂ ಪಾಲಿಗೆ ಗುರುವಾರ ಬಿಗ್‌ಡೇ – ಮುಡಾ ಕೇಸಲ್ಲಿ ತಾತ್ಕಾಲಿಕ ತಡೆ ವಿಸ್ತರಣೆ ಆಗುತ್ತಾ?
ಅಂದಹಾಗೆ ಟಿಟಿ ವಾಹನ ಆಂಧಪ್ರದೇಶದ ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ಬರುತ್ತಿತ್ತು. ಅಪಘಾತಕ್ಕೀಡಾದ ಕಾರು ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆಗೆ ಹೋಗುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಕಾರಿನಲ್ಲಿದ್ದವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದರು. ಬುಧವಾರ ಸಂಬಂಧಿಕರ ಮದುವೆಗೆ ಅಂತ ಆಂಧ್ರದ ಕಡೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.ಇನ್ನೂ ಟಿಟಿ ವಾಹನದಲ್ಲಿದ್ದವರು ಸಹ ಬೆಂಗಳೂರಿನವರಾಗಿದ್ದು, ಬಾಯಿಕೊಂಡ ಗಂಗಮ್ಮ ದೇವಾಲಯಕ್ಕೆ ಹೋಗಿ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದರು ಅಂತ ತಿಳಿದುಬಂದಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ Sign in to your account
Username or Email Address


Password

 Remember Me


