ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ರಿಂದ ದೂರು ನೀಡಲಾಗಿದ್ದು, ಮೂರು ಪ್ರಕರಣಗಳಲ್ಲಿ ಎರಡರಲ್ಲಿ ದರ್ಶನ್ ಎ1 ಆರೋಪಿಯನ್ನಾಗಿಸಲಾಗಿದೆ‌. 3ನೇ ಎಫ್ಐಆರ್ ಜೈಲು ಅಧಿಕಾರಿಗಳ ಮೇಲಾಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.ಏನೇನು ಪ್ರಕರಣ – ಯಾರು ಆರೋಪಿ?
1) ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
A1- ದರ್ಶನ್
A2- ನಾಗರಾಜ್
A3-ವಿಲ್ಸನ್ ಗಾರ್ಡನ್ ನಾಗ
A4-ಕುಳ್ಳ ಸೀನಾ.2) ಮತ್ತೊಂದು ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
A1-ದರ್ಶನ್
A2-ಧರ್ಮ
A3-ಸತ್ಯ3)U/S 42, 54 (1(A) Prisons Act & 238, 323 BNS ಅಕ್ಟ್ ಅಡಿ ಎಫ್‌ಐಆರ್‌
A1-ಸುದರ್ಶನ್ ಕೆ.ಎಸ್.
A2-ಮುಜೀಬ್
A3-ಪರಮೇಶ ನಾಯಕ್ ಲಮಾಣಿ
A4- ಕೆ ಬಿ ರಾಯಮನೆಸಿಸಿಬಿ ದಾಳಿ; ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆ: 
ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೇಲು ಎಂಬಾತನ ಮೊಬೈಲ್‌ನಿಂದ ದರ್ಶನ್‌ ಜೈಲಿನಲ್ಲಿ ದರ್ಬಾರ್‌ ನಡೆಸುತ್ತಿರೋ ಫೋಟೋ ಸೋರಿಕೆ ಆಗಿತ್ತು, ಧರ್ಮ ಎಂಬಾತ ಮೊಬೈಲ್‌ನಿಂದ ದರ್ಶನ್‌ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಸಿಸಿಬಿ ಅಧಿಕಾರಿಗಳ ಕೈಗೆ ಯಾವುದೇ ಮೊಬೈಲ್‌ ಸಿಕ್ಕಿಲ್ಲ ಅಂತ ಅಧಿಕಾರಿಗಳು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ಸಿಸಿಬಿ ದಾಳಿ ನಡೆಯುತ್ತೆ ಅಂತ ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆಯಾಗಿತ್ತು ಎಂದೂ ಮೂಲಗಳು ತಿಳಿಸಿವೆ.ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ: 
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ರನ್ನ ಮಂಗಳವಾರ ಅಥವಾ ಬುಧವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ. ನಟೋರಿಯಸ್ ರೌಡಿ ನಾಗನ ಜೊತೆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ನೂರು ವರ್ಷಗಳ ಇತಿಹಾಸ ಇರುವ ಈ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರೋ ಖೈದಿಗಳು ಇದ್ದಾರೆ. ನಟೋರಿಯಸ್ ರೌಡಿಗಳು, ಸಮಾಜಘಾತಕರು, ದೇಶದ್ರೋಹಿಗಳು, ವಿಕೃತ ಕಾಮಿಗಳು ಇರುವಂತ ಜೈಲಿಗೆ ದರ್ಶನ್ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಖುದ್ದು ಸಿಎಂ ಸಿದ್ದಾರಮಯ್ಯ ಅವರೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿದ್ದಾರೆ. ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇರುವಂಥ ಜೈಲು ಇದಾಗಿದ್ದು, ದರ್ಶನ್ ಗೆ ಶಿಫ್ಟ್ ಮಾಡುವ ಮೂಲಕ, ಈಗಿನಿಂದಲೇ ಶಿಕ್ಷೆ ಕೊಡೋಕೆ ಸಿದ್ಧತೆ ನಡೆದಿದೆ.ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ: 
ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸಂಜೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ಪೊಲೀಸರು ಮಂಗಳವಾರ (ಆ.27) ಕೋರ್ಟ್‌ ಗಮನಕ್ಕೆ ತಂದು ಬಾಡಿವಾರೆಂಟ್ ಗೆ ಪಡೆಯಲು ತಯಾರಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ದರ್ಶನ್‌ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.Sign in to your account
Username or Email Address


Password

 Remember Me


