ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಫೋಟೋ ವೈರಲ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ (Wilson Garden Naga) ರಾಯಲ್ ಲೈಫ್ ಒಂದೊಂದಾಗಿ ತೆರೆದುಕೊಳ್ತಿದೆ.ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್, ಐಷಾರಾಮಿ ವೆಸ್ಟರ್ನ್ ಟಾಯ್ಲೆಟ್, ಹೈಟೇಕು ಹಾಸಿಗೆ, ಜಿಮ್ ಉಪಕರಣ, ಹೀಗೆ ಒಂದಾ ಎರಡಾ? ನಾಗನ ಐಷಾರಾಮಿ ಬ್ಯಾರಕ್ ನೋಡಿ ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿʻದಾಸʼನ ಜೊತೆ ಕುಳಿತು ಹರಟೆ ಹೊಡೆದಿದ್ದ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ (T Shirt) ಬೆಲೆಯೇ 15-20 ಸಾವಿರ ರೂ. ಇದೆ ಎನ್ನಲಾಗಿದೆ. ದುಬೈ ಸೇರಿದಂತೆ ಫಾರಿನ್ ಕಾಸ್ಟ್ಲಿ ಬ್ರ್ಯಾಂಡ್ ಟಿ-ಶರ್ಟ್‌ಗಳನ್ನ ನಾಗ ಧರಿಸ್ತಿದ್ದಾನೆ. ಇದಲ್ಲದೇ ಬ್ಯಾರಕ್‌ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆಇನ್ನೂ ನಾಗನ ಬ್ಯಾರಕ್‌ನಿಂದ ದಾಸನಿಗೆ ಊಟ ಹೋಗ್ತಿರೊ ಆರೋಪದ ನಡುವೆಯೇ ಫೋಟೊ ವೈರಲ್ ಆಗಿದೆ. ಇಷ್ಟಾದ್ರು ಖತರ್ನಾಕ್ ರೌಡಿಗಳನ್ನ ಶಿಫ್ಟಿಂಗ್ ಮಾಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಪೊಲೀಸ್‌ ಆಯುಕ್ತ ದಯಾನಂದ್ ಪತ್ರ ಕೂಡ ಬರೆದಿದ್ದರು. ಜೈಲಲ್ಲಿದ್ದಕೊಂಡೇ ಲಿಟಿಗೇಷನ್ ಪ್ರಾಪರ್ಟಿ ಸೇರಿದಂತೆ ಬೆದರಿಕೆ ಕಾಲ್ ಮಾಡ್ತಿರುವ ರೌಡಿಶೀಟರ್‌ಗಳ ವಿರುದ್ಧ ಕ್ರಮ ಆಗ್ತಿಲ್ಲ ಅನ್ನೋದಂತು ಸತ್ಯ. ಇದನ್ನೂ ಓದಿ: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡSign in to your account
Username or Email Address


Password

 Remember Me


