– ರಾಜಾತಿಥ್ಯ ನೀಡಿರುವ ಅಧಿಕಾರಿ, ಸಿಬ್ಬಂದಿಗಳಿಗೆ ನಡುಕಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara) ದರ್ಶನ್‌ಗೆ (Darshan) ವಿಶೇಷ ಆತಿಥ್ಯ ನೀಡಿರುವದನ್ನ ತನಿಖೆ ಮಾಡಲು ಇಬ್ಬರು ಐಜಿಪಿಗಳ(Inspector- General Of Police) ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಕಾರಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ(Malini Krishnamurthy) ಆದೇಶ ನೀಡಿದ್ದಾರೆ.ಐಜಿಪಿ ಬಿ.ವಿ. ಆನಂದ್ ರೆಡ್ಡಿ ಹಾಗೂ ಐಜಿಪಿ ಸೋಮಶೇಖರ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳಿಗೆ 15 ದಿನಗಳ ಒಳಗಾಗಿ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ಕೊಟ್ಟಿರುವ ವರದಿ ನೀಡಲು ಸೂಚನೆ ಕೊಡಲಾಗಿದೆ. ಇದನ್ನೂ ಓದಿ: ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್ಕೊಲೆ ಆರೋಪಿ ನಟ ದರ್ಶನ್‌ಗೆ ಜೈಲನ್ನೇ ರೆಸಾರ್ಟ್ ಮಾಡಿಕೊಟ್ಟಿರುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಈಗ ನಡುಕ ಶುರುವಾಗಿದೆ. ದರ್ಶನ್‌ಗೆ ರಾಜಾತಿಥ್ಯಕ್ಕೆ (Royal Treatment) ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ಮೇಲೆ ತೂಗುಕತ್ತಿ ತೂಗಾಡುತ್ತಿದೆ. ಜೈಲಿನಲ್ಲಿ ಬಿಂದಾಸ್ ಆಗಿ ಇರಲು ವ್ಯವಸ್ಥೆ ಮಾಡಿಕೊಟ್ಟಿರುವ ಹಿಂದಿನ ಕೈ ಯಾರದು? ಇದೀಗ ಆರೋಪಿ ರೌಡಿಶೀಟರ್ಸ್ ಗಳ ಜೊತೆ ಜೈಲಿನಲ್ಲಿ ನಂಟು ಬೆಳೆಸಿಕೊಂಡು ಹಾಯಾಗಿ ಕಾಲಕಳೆಯುತ್ತಿರುವ ಪೋಟೋ, ವಿಡಿಯೋ ಬಹಿರಂಗ ಆಗಿರುವ ಬಗ್ಗೆ ಆಂತರಿಕ ತನಿಖೆಯ ಬೇಟೆಗೆ ಹಿರಿಯ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪರೌಡಿಶೀಟರ್‌ಗಳ ಜೊತೆ ನೋಟು ಬೆಳೆಸಲು ನಟ ದರ್ಶನ್‌ಗೆ ಬಿಟ್ಟಿದ್ದು ಯಾರು? ವಿಶೇಷ ಆತಿಥ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳು ಯಾರು? ಹಣ ಪಡೆದು ದರ್ಶನ್‌ಗೆ ವಿಶೇಷ ಆತಿಥ್ಯ ಕೊಟ್ಟಿದ್ದಾರಾ? ಎಂಬಿತಾದಿ ವಿಚಾರದ ಬಗ್ಗೆ ತನಿಖೆ ಮಾಡಿ ಕಾರಗೃಹ ಇಲಾಖೆಯ ಡಿಜಿ.ಗೆ ವರದಿ ಸಲ್ಲಿಸಲಾಗುತ್ತದೆ. ವರದಿಯನ್ನ ಪರಿಶೀಲನೆ ಮಾಡಿ ತಪ್ಪಿತಸ್ತರ ವಿರುದ್ಧ ಅಮಾನತಿನ ಅಸ್ತ್ರ ಪ್ರಯೋಗ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳುSign in to your account
Username or Email Address


Password

 Remember Me


