ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ದರ್ಶನ್ (Actor Darshan) ಮತ್ತು ವಿಲ್ಸನ್ ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಬೇರೆ ಕಡೆ ಶಿಫ್ಟ್ ಆಗುವ ಸಾಧ್ಯತೆಯಿದೆ.ಮೂಲಗಳ ಪ್ರಕಾರ ಎರಡು ದಿನಗಳ ಒಳಗಡೆ ಬಳ್ಳಾರಿ (Ballary) ಅಥವಾ ಬೆಳಗಾವಿ (Belagavi) ಜೈಲಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇಬ್ಬರನ್ನು ಸ್ಥಳಾಂತರ ಮಾಡುವ ಸಂಬಂಧ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತುಫೋಟೋ ವೈರಲ್ ಆದ ಬೆನ್ನಲ್ಲೇ ಸರ್ಕಾರ ಈಗಾಗಲೇ 7 ಮಂದಿಯನ್ನು ಅಮಾನತು ಮಾಡಿದೆ.ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ (Parameshwar) ಜೈಲಿನಲ್ಲಿ ಈ ರೀತಿ ನಡೆಯಬಾರದು. 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ತೆಗೆದುಕೊಂಡಿದೆ. ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.ಜೈಲು ಅಧಿಕಾರಿಗಳಾದ ಶರಣ ಬಸವ ಅಮೀನ್‌ಗಡ್, ಪ್ರಭು ಎಸ್. ಖಂಡೇಲ್‌ವಾಲ್, ಅಸಿಸ್ಟೆಂಟ್ ಜೈಲರ್ಸ್ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಲಾಗಿದೆ.ಇದನ್ನೂ ಓದಿ: ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್- ಜೈಲು ನಿಯಮ ಏನು ಹೇಳುತ್ತೆ?ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ (DG Malini Krishnamurthy) ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನು ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.Sign in to your account
Username or Email Address


Password

 Remember Me


