ಮಂಡ್ಯ: ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ದಿಶಾ ಸಭೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.ಇಂದು ಮಂಡ್ಯದ (Mandya) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ದಿಶಾ ಸಭೆ ಆರಂಭಗೊಳ್ಳಲಿದೆ. ಒಂದು ಕಡೆ ಕುಮಾರಸ್ವಾಮಿ ಅವರು ಕೇಂದ್ರದ ಯಾವೆಲ್ಲಾ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂಬ ಕುತೂಹಲ ಇದ್ದರೆ, ಇನ್ನೊಂದೆಡೆ ದಿಶಾ ಸಭೆಯ ಮೂಲಕ ಸಚಿವ ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಹೇಗೆ ತಿರುಗೇಟು ನೀಡುತ್ತಾರೆ ಎಂಬ ಕುತೂಹಲವು ಸಹ ಇದೆ. ಇತ್ತೀಚಿಗಷ್ಟೇ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ (Chaluvarayaswamy) ವಾಗ್ದಾಳಿ ನಡೆಸಿದ್ದರು. ರಾಜಕೀಯ ಸಭೆಗೆ ಬನ್ನಿ ಅಂದ್ರೆ ಕುಮಾರಸ್ವಾಮಿ ಮಧ್ಯರಾತ್ರಿಯಾದ್ರೂ ಬರುತ್ತಾರೆ. ಆದರೆ ಅಭಿವೃದ್ಧಿ ಕುರಿತ ಸಭೆಗಳಿಗೆ ಬರಲ್ಲ ಎಂದು ಕೆಡಿಪಿ ಸಭೆಗೆ ಗೈರಾಗಿದ್ದಕ್ಕೆ ಚಲುವರಾಯಸ್ವಾಮಿ ಕಿಡಿಕಾರಿದ್ದರು. ಇದನ್ನೂ ಓದಿ:ದರ್ಶನ್ ಜೊತೆ ಕುಳಿತ ನಟೋರಿಯಸ್ ರೌಡಿಶೀಟರ್‌ಗಳು ಯಾರು?ಇಂದು ದಿಶಾ ಸಭೆ ಕರೆಯುವ ಮೂಲಕ ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ಟಕ್ಕರ್ ನೀಡಿದ್ದಾರೆ. ಇಂದಿನ ದಿಶಾ ಸಭೆಗೆ ಸಚಿವ ಚಲುವರಾಯಸ್ವಾಮಿ ಗೈರು ಖಚಿತವಾಗಿದೆ. ಸದ್ಯ ವಿದೇಶ ಪ್ರವಾಸದಲ್ಲಿರುವುದರಿಂದ ಚಲುವರಾಯಸ್ವಾಮಿ ಸಭೆಗೆ ಗೈರಾಗಲಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಉಳಿದ ಕಾಂಗ್ರೆಸ್ ಶಾಸಕರಾದರೂ ಸಭೆಯಲ್ಲಿ ಭಾಗಿಯಾಗುತ್ತಾರಾ? ರಾಜಕೀಯ ಮರೆತು ಅಭಿವೃದ್ಧಿ ವಿಚಾರದಲ್ಲಿ ಒಂದಾಗುತ್ತಾರಾ ಎಂಬ ಚರ್ಚೆ ಸಹ ಇದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರ್‌ಗಳು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ


 Advertisement 







 Advertisement 




Sign in to your account
Username or Email Address


Password

 Remember Me


