ಮುಂದಿನ 7 ದಿನಗಳ ಕಾಲ ರಾಜ್ಯಕ್ಕೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿ.ಮೀ ಸಂಭವಿಸುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆ ಇದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 28-20
ಮಂಗಳೂರು: 28-24
ಶಿವಮೊಗ್ಗ: 26-21
ಬೆಳಗಾವಿ: 23-21
ಮೈಸೂರು: 28-21ಮಂಡ್ಯ: 29-22
ಮಡಿಕೇರಿ: 21-17
ರಾಮನಗರ: 29-21
ಹಾಸನ: 24-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 28-21ಕೋಲಾರ: 29-21
ತುಮಕೂರು: 28-21
ಉಡುಪಿ: 28-24
ಕಾರವಾರ: 27-25
ಚಿಕ್ಕಮಗಳೂರು: 23-19
ದಾವಣಗೆರೆ: 27-22ಹುಬ್ಬಳ್ಳಿ: 26-21
ಚಿತ್ರದುರ್ಗ: 27-21
ಹಾವೇರಿ: 26-22
ಬಳ್ಳಾರಿ: 30-23
ಗದಗ: 26-21
ಕೊಪ್ಪಳ: 28-22ರಾಯಚೂರು: 29-23
ಯಾದಗಿರಿ: 29-23
ವಿಜಯಪುರ: 27-22
ಬೀದರ್: 27-22
ಕಲಬುರಗಿ: 28-23
ಬಾಗಲಕೋಟೆ: 28-22






 Advertisement 




Sign in to your account
Username or Email Address


Password

 Remember Me


