ರಾಯಚೂರು: ಹೆಚ್‌ಡಿ.ಕುಮಾರಸ್ವಾಮಿಗೆ (HD Kumaraswamy) ಮಾತನಾಡಲು ವಿಷಯವಿಲ್ಲದೆ ಪೂರ್ತಿ ಹುಚ್ಚು ಹಿಡಿದಿದೆ. ಸುಮ್ಮನೆ ಒದರುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು (NS Bosaraju) ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಕೈ ನೀಡಿದ್ದ ಗ್ಯಾರಂಟಿ ಅನ್ನಭಾಗ್ಯದ ಹಣ ಸರಿಯಾಗಿ ತಲುಪುತ್ತಿಲ್ಲ : ಕೋಲಾರದಲ್ಲಿ ಸಾರ್ವಜನಿಕರ ಆಕ್ರೋಶಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) 14 ಸೈಟ್‌ಗಳನ್ನ ಮರಳಿಸಿದ್ದಾರೆ. ಸೈಟ್ ವಾಪಸ್ ನೀಡಿದ ಮೇಲೆ ಕುಮಾರಸ್ವಾಮಿಗೆ ಮಾತನಾಡಲು ವಿಷಯವಿಲ್ಲ. ಅದಕ್ಕೆ ಹುಚ್ಚು ಹಿಡಿದವರ ಹಾಗೇ ಒದರಾಡುತ್ತಿದ್ದಾರೆ ಎಂದರು.ಮುಡಾ ಪ್ರಕರಣದಲ್ಲಿ (MUDA Scam) ನನ್ನ ಪತಿ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿರುವ 14 ಸೈಟ್‌ಗಳನ್ನ ವಾಪಸ್ ಕೊಡುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ ಹೇಳಿದ್ದಾರೆ. ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಸೈಟ್ ಸರೆಂಡರ್ ಮಾಡಿದ್ದಾರೆ. ಇದಕ್ಕೆ ಹೇಗೆ ಸರೆಂಡರ್ ಮಾಡಿದರೂ ಎಂದು ಕುಮಾರಸ್ವಾಮಿ ಕೇಳ್ತಾರೆ. ಅಶೋಕನನ್ನು ಕೇಳಿದರೆ ನಾನು ಆವಾಗಲೇ ಜಾಗವನ್ನು ಮರಳಿಸಿದ್ದೇನೆ ಎನ್ನುತ್ತಾರೆ. ಅವರು ವಿರೋಧ ಪಕ್ಷದ ನಾಯಕರು ಇವರು ಕೇಂದ್ರ ಸಚಿವರು. ಇವರಿಗೆ ಯಾವ ರೀತಿಯ ಬದ್ಧತೆಯಿದೆ. ಜವಾಬ್ದಾರಿಯಿದೆ. ಇವರ ಮಾತುಗಳಿಗೆ ಅರ್ಥವಿದೆಯಾ? ಹುಚ್ಚರು ಮಾಡಿದ ಹಾಗೇ ಮಾಡಿ ಏನೇನೋ ಒದರಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನಕುಮಾರಸ್ವಾಮಿ ಮೇಲೆ 50 ಕೋಟಿ ರೂ. ಲಂಚ ಆರೋಪದಲ್ಲಿ ಎಫ್‌ಐಆರ್ ಆಗಿದೆ. ವಿಥ್ ರೆಕಾರ್ಡ್ ಕೇಸ್ ಆಗಿದೆ. ಅಶೋಕ್ ಅವರ ಮೇಲೆ ಎಫ್‌ಐಆರ್ ಆಗಿದೆ. ಯಡಿಯೂರಪ್ಪ ಮೇಲೆ ನೂರಾರು ಕೇಸ್ ಇವೆ. ಇದಕ್ಕೆಲ್ಲಾ ಏನು ಉತ್ತರ ಕೊಡುತ್ತಾರೆ? ಅವರದೇ ಪಕ್ಷದಲ್ಲಿರುವವರು ಭ್ರಷ್ಟಾಚಾರ ಮಾಡಿ ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಅವರ ಪಕ್ಷದ ಯತ್ನಾಳ್ ಹೇಳಿದ್ದಾರೆ. ಈ ಸರ್ಕಾರ ತೆಗೆದು ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಕುಮಾರಸ್ವಾಮಿ, ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಉತ್ತರ ಕೊಡಬೇಕಲ್ಲ. ಅಮಿತ್ ಶಾ, ಮೋದಿ ಸಹ ಏನೂ ಮಾತನಾಡುತ್ತಿಲ್ಲ. ಕೇಶವ ಕೃಪಾಕ್ಕೆ ಕರೆದು ಆರ್‌ಎಸ್‌ಎಸ್‌ನವರಿಗೆ ಸರಿ ಮಾಡಲು ಕಳುಹಿಸಿದ್ದಾರೆ ಇದು ಬಹಿರಂಗವಾದ ವಿಷಯ ಎಂದು ತಿಳಿಸಿದರು.Sign in to your account
Username or Email Address


Password

 Remember Me


