ಬೆಂಗಳೂರು: ನಗರದ (Bengaluru) ನಾಗರೀಕರಿಗೆ ಉಪಕಾರ ಸ್ಮರಣೆ ಇಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆ ವಿರುದ್ಧ ಜೆಡಿಎಸ್ (JDS) ಕಿಡಿಕಾರಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಡಿಸಿಎಂ ಡಿ.ಕೆ ಶಿವಕುಮಾರ್ ನಿಮ್ಮ ಧಿಮಾಕಿನ ದುರಹಂಕಾರದ ಮಾತಿಗಳಿಗೆ ನಾಡಿನ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಉಚಿತ, ಉಚಿತ, ಉಚಿತ, ಅಧಿಕಾರ ಹಿಡಿದ ಮೇಲೆ ಬೆಲೆ ಏರಿಕೆ ಖಚಿತ, ಖಚಿತ, ಖಚಿತ. ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆಗಳನ್ನು ಏರಿಸುತ್ತಲೇ ನಾಡಿನ ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ, ಎಷ್ಟು ಮಾಡಿದ್ರೂ ಅಷ್ಟೇ. ಬೆಂಗಳೂರಲ್ಲಿ ನೀರಿನ ದರ ಹೆಚ್ಚಿಸೇ ಹೆಚ್ಚಿಸ್ತೀವಿ. ಅಧಿಕಾರಕ್ಕೆ ಬಂದ ಮೇಲೆ ಉಪಕಾರ ಸ್ಮರಣೆ ಇಲ್ಲ ಎಂದು ಜನರನ್ನು ಜರಿಯಲು ನಿಮಗೆ ಯಾವ ನೈತಿಕತೆ ಇದೆ? ಡಿ.ಕೆ ಶಿವಕುಮಾರ್ ನಿಮ್ಮ ಧೀಮಾಕಿನ, ದುರಂಹಕಾರದ ಮಾತುಗಳಿಗೆ ನಾಡಿನ ಜನರು ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ನೀರಿಕ್ಷಿಸಿ ಎಂದು ಟ್ವೀಟ್‌ನಲ್ಲಿ ಎಚ್ಚರಿಸಲಾಗಿದೆ.Sign in to your account
Username or Email Address


Password

 Remember Me


