ಬೆಂಗಳೂರು: ಮುಡಾ (MUDA) ವಿಚಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಬದಲು ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಅವರು ಹೇಳಿದರು.ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರು ಪದೇ ಪದೇ ಅನೇಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಡಾ ಬಗ್ಗೆ ದೇಸಾಯಿ ಆಯೋಗವು ತನಿಖೆ ಆರಂಭಿಸಿದೆ. ಮುಡಾ ಅಕ್ರಮದ ಬಗ್ಗೆ ಮಾಹಿತಿ ಇದ್ದರೆ ಆಯೋಗಕ್ಕೆ ನೀಡಲಿ. ಸಾರ್ವಜನಿಕವಾಗಿ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವುದು ಬೇಡ ಎಂದರಲ್ಲದೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumarswamy)  ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.ಇದನ್ನೂ ಓದಿ: ದಲಿತರ ಬಗ್ಗೆ ಮಾತಾಡೋ ನೈತಿಕತೆ ಬಿಜೆಪಿಯವರಿಗೆ ಇಲ್ಲ – ಸಿದ್ದರಾಮಯ್ಯಕೋವಿಡ್ ಸಂದರ್ಭದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಮೈಕಲ್ ಕುನ್ಹಾ (John Michael Cunha) ಅವರ ವರದಿ ಬರುವವರೆಗೂ ಏನನ್ನು ಮಾಡಲಾಗುವುದಿಲ್ಲ. ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೆ ಎಂಬುದನ್ನು ಗಮನಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕ್ರಿಮಿನಲ್ ಪ್ರೊಸಿಡಿಂಗ್ಸ್ ಮಾಡಬೇಕು ಅಂತ ವರದಿಯಲ್ಲಿ ಬಂದರೆ, ಅದರಂತೆ ಕ್ರಮ ಕೈಗೊಳ್ಳಲಾಗುವುದು ಸ್ಪಷ್ಟನೆ ನೀಡಿದ್ದಾರೆರಾಜ್ಯಾಪಾಲರು ರಕ್ಷಣೆ ಕೇಳಿದ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ. ಅವರಿಗೆ ಯಾವ ರೀತಿಯ ಬೆದರಿಕೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬ ಸನ್ನಿವೇಶವನ್ನು ಬೆಜಿಪಿಯವರು ಸೃಷ್ಟಿ ಮಾಡಿದ್ದಾರೆ. ಇದಕ್ಕೆಲ್ಲಾ ಬಿಜೆಪಿಯವರ (BJP) ಇತ್ತೀಚಿನ ಬೆಳವಣಿಗೆಗಳೇ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ, ಮೊದಲು ನನ್ನನ್ನ ಫೇಸ್ ಮಾಡಿ – ಹೆಚ್‌ಡಿಕೆಗೆ ಜಮೀರ್‌ ಸವಾಲ್Sign in to your account
Username or Email Address


Password

 Remember Me


