ಬೆಂಗಳೂರು: ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಕ್ಕೆ ಆಪ್ಷನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಪೋರ್ಟಲ್ ತೆರೆದಿದೆ.ಆಗಸ್ಟ್ 22ರ ಬೆಳಿಗ್ಗೆ 10ರವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸಂಬಂಧ ಇದೇ ಮೊದಲ ಬಾರಿಗೆ‌ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸಪ್‌ ಸಂದೇಶ ಕೂಡ ರವಾನಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ದುಷ್ಮನ್ ಕಹಾ ಹೈ ಅಂದ್ರೆ, ಕಾಂಗ್ರೆಸ್ ಪಾರ್ಟಿ ತುಂಬಾ ಹೈ: ಹಿತಶತ್ರುಗಳ ಬಗ್ಗೆ ಸಿಎಂಗೆ ಆರ್‌.ಅಶೋಕ್‌ ಎಚ್ಚರಿಕೆಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೂ ಆಪ್ಷನ್ (ಆಯ್ಕೆ)ಗಳನ್ನು ದಾಖಲಿಸಲು ಅವಕಾಶ ಇರುತ್ತದೆ ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ/ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಹಾಗೆಯೇ ಕಾಲೇಜು ಶುಲ್ಕದ ಮಾಹಿತಿ ಕೂಡ ಇದ್ದು, ಅದನ್ನೂ ಗಮನಿಸಿಯೇ‌ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೂ ಪ್ರಸನ್ನ ಸಲಹೆ ನೀಡಿದ್ದಾರೆ. ಆಪ್ಷನ್‌ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡೇ ಮುಂದಡಿ ಇಡಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂ ಒಳಹರಿವು ಹೆಚ್ಚಳ – 4 ದಿನಗಳಲ್ಲಿ ಹರಿದು ಬಂತು 7 ಟಿಎಂಸಿ ನೀರುSign in to your account
Username or Email Address


Password

 Remember Me


