ಬೆಂಗಳೂರು: ವಿಧಾನ ಪರಿಷತ್‌ನಲ್ಲಿ (Legislative Council) ಬಹುಮತ ಬಂದ ಕೂಡಲೇ ಬಿಜೆಪಿ (BJP) ಅವಧಿಯಲ್ಲಿ ಜಾರಿಗೆ ತಂದಿರುವ ಭೂ ಕಂದಾಯ ಕಾಯ್ದೆ (Land Revenue Act) ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.ವಿಧಾನಸೌಧದಲ್ಲಿ ನಡೆದ ದೇವರಾಜ್ ಅರಸ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ್ ಅರಸ್ ಅವರು ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು. ಆದರೆ ಇವತ್ತು ಉಳುಮೆ ಮಾಡದವನೂ ಭೂಮಿ ಪಡೆಯುತ್ತಿದ್ದಾನೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಶತಮಾನ ಕಂಡ ಸರ್ಕಾರಿ ಶಾಲೆ ಕಿಡಿಗೇಡಿಗಳಿಂದ ಧ್ವಂಸಕೃಷಿ ಭೂಮಿಯನ್ನು ಈಗ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ಅದಕ್ಕೆ ಬಿಜೆಪಿಯವರು ನಿಯಮ ಬದಲಾವಣೆ ಮಾಡಿದರು. ನೇಗಿಲು ಹಿಡಿಯದೇ ಇದ್ದವರು ಸಹ ಕೃಷಿ ಭೂಮಿ ಖರೀದಿ ಮಾಡಬಹುದಾಗಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು. ವಿಧಾನ ಪರಿಷತ್‌ನಲ್ಲಿ ನಮಗೆ ಬೆಂಬಲ ಇಲ್ಲ. ವಿಧಾನ ಪರಿಷತ್‌ನಲ್ಲಿ ನಮಗೆ ಬಹುಮತ ಬಂದ ಬಳಿಕ ಈ ನಿಯಮ ಬದಲಾವಣೆ ಮಾಡುತ್ತೇನೆ. ಭೂಕಂದಾಯ ಕಾಯ್ದೆ 79/A/B ನಿಯಮ ರದ್ದು ಮಾಡೇ ಮಾಡುತ್ತೇನೆ ಎಂದು ಘೋಷಿಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ


 Advertisement 







 Advertisement 




Sign in to your account
Username or Email Address


Password

 Remember Me


