ಬೆಂಗಳೂರು: ಸರ್ಕಾರಿ ನೌಕರರು (Karnataka Government Employees) ಇನ್ನು ಮುಂದೆ ಕೆಂಪು-ಹಳದಿ (Red-Yelow) ಬಣ್ಣದ ಐಡಿ ಕಾರ್ಡ್ ಟ್ಯಾಗ್ ಹಾಕುವಂತೆ ಸರ್ಕಾರ ಆದೇಶಿಸಿದೆ.ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಟ್ಯಾಗ್ ಹಾಕಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗದ ಅಧೀನ ಕಾರ್ಯದರ್ಶಿ ಸಂದೀಪ್‌ ಬಿ.ಕೆ ಆದೇಶಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿಗಳ ಪರಿಷ್ಕರಣೆ ಆಗಲ್ಲ: ಬಸವರಾಜ ರಾಯರೆಡ್ಡಿನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಇಟ್ಟು 50 ವರ್ಷಗಳಾದ ಹಿನ್ನಲೆಯಲ್ಲಿ ಸರ್ಕಾರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕರ್ನಾಟಕ ಅಭಿಯಾನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಐಡಿ ಕಾರ್ಡ್ ಟ್ಯಾಗ್ ಅನ್ನು ಕೆಂಪು-ಹಳದಿ ಟ್ಯಾಗ್ ಬಳಸುವಂತೆ ಆದೇಶ ಹೊರಡಿಸಲಾಗಿದೆ.ಸರ್ಕಾರದ ಎಲ್ಲಾ ನೌಕರರು, ನಿಗಮ,ಮಂಡಳಿಗಳ, ನಿರ್ದೇಶಾನಲಯ, ಅರೆ ಸರ್ಕಾರಿ ನೌಕರರು ತಮ್ಮ ಇಲಾಖೆ ಐಡಿ ಕಾರ್ಡ್‌ಗೆ ಹೊಂದುವಂತೆ ಟ್ಯಾಗ್ ನೀಡಲು ಸಂಬಂಧಿಸಿದ ಇಲಾಖೆಗಳು ಕ್ರಮವಹಿಸುವಂತೆ ಸೂಚಿಸಲಾಗಿದೆ. Sign in to your account
Username or Email Address


Password

 Remember Me


