ಬೆಂಗಳೂರು: ಸರ್ಕಾರಕ್ಕೆ ಗ್ಯಾರಂಟಿ (Congress Guarantee) ಹೊಡೆತದ ಶಾಕ್ ನಡುವೆಯೇ ತೆರಿಗೆ ಸಂಗ್ರಹ (Karnataka Tax collection) ಶಾಕ್ ಕೂಡಾ ಬಿದ್ದಿದೆ. ಈ ವರ್ಷದ ಮೊದಲ 4 ತಿಂಗಳ ತೆರಿಗೆ ಸಂಗ್ರಹದಲ್ಲಿ ಸುಮಾರು 6 ಸಾವಿರ ಕೋಟಿ ತೆರಿಗೆ ಸಂಗ್ರಹ ಖೋತಾ ಆಗಿದೆ. ತೆರಿಗೆ ಸಂಗ್ರಹ ಮಾಡಲು ಇಲಾಖೆಗಳು ಹರಸಾಹಸ ಪಡುತ್ತಿವೆ‌. ತೆರಿಗೆ ಸಂಗ್ರಹ ಕಡಿಮೆ‌ ಆಗಿದ್ದು,ಆರ್ಥಿಕ ಇಲಾಖೆಗೆ ತಲೆನೋವು ತರಿಸಿದೆ.ಗ್ಯಾರಂಟಿಗಳಿಗೆ ದುಡ್ಡು ಹೊಂದಿಸಲು ಪರದಾಡುತ್ತಿರೋ ಸರ್ಕಾರಕ್ಕೆ, ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ಸುಮಾರು 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಇಲಾಖೆಗೆಳು ಹಿಂದೆ ಬಿದ್ದಿರೋದು, ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.ತೆರಿಗೆ ಸಂಗ್ರಹದ ವಿವರ ನೋಡೊದಾದ್ರೆ ವಾಣಿಜ್ಯ ತೆರಿಗೆಯಲ್ಲಿ ವಾರ್ಷಿಕ ಗುರಿ- 1,10,000 ಕೋಟಿ ರೂ. ಇದ್ದರೆ 4 ತಿಂಗಳಲ್ಲಿ ಸಂಗ್ರಹ- 32834 ಕೋಟಿ ರೂ. ಆಗಿದೆ. ಅಬಕಾರಿಯಲ್ಲಿ ವಾರ್ಷಿಕ (Tax target) ಗುರಿ 38525 ಕೋಟಿ ರೂ. ಇದ್ದರೆ ಸಂಗ್ರಹವಾಗಿರೋದು 11932 ಕೋಟಿ ರೂ. ಆಗಿದೆ. ಇನ್ನೂ ಮುದ್ರಾಂಕ-ನೋಂದಣಿಯಲ್ಲಿ ವಾರ್ಷಿಕ ಗುರಿ 26000 ಕೋಟಿ ರೂ. ಇದ್ದರೆ ಸಂಗ್ರಹವಾಗಿರೋದು 7665 ಕೋಟಿ ರೂ. ಆಗಿದೆ.4 ತಿಂಗಳ ಗುರಿ ಎಷ್ಟು ಅಂತ ನೋಡೋದಾದ್ರೆ ಏಪ್ರಿಲ್, ಮೇ, ಜೂನ್, ಜುಲೈ ನಲ್ಲಿ ಸಂಗ್ರಹದ ಗುರಿ 58175 ಕೋಟಿ ರೂ. ಇತ್ತು. ಆದರೆ ಈಗ ಸಂಗ್ರಹವಾಗಿದ್ದು- 52431 ಕೋಟಿ ರೂ. ಆಗಿದೆ. ತೆರಿಗೆ ಸಂಗ್ರಹ ಕೊರತೆ ಸುಮಾರು 5744 ಕೋಟಿ ರೂ. ಆಗಿದೆ.Sign in to your account
Username or Email Address


Password

 Remember Me


