ಬೆಂಗಳೂರು: ಅಕ್ಟೋಬರ್ ಮೊದಲ ವಾರದಲ್ಲೇ ಮಳೆಯ (Rain) ಎಚ್ಚರಿಕೆಯನ್ನ ಹವಾಮಾನ ಇಲಾಖೆ (IMD) ನೀಡಿದ್ದು, ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಅಕ್ಟೋಬರ್ 9ರವರೆಗೆ ಅತ್ಯಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಶುರುವಾಗಿದ್ದು, ದಕ್ಷಿಣ ಒಳನಾಡು ಭಾಗದ ಬೆಂಗಳೂರು, ಮಂಡ್ಯ, ರಾಮನಗರ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವಡೆ ಮಳೆಯಾಗುತ್ತಿದೆ. ಮುಂದಿನ 2 ದಿನಗಳ ಕಾಲ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲೂ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಬ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!ಇಂದು (ಗುರುವಾರ) ಬೆಂಗಳೂರಿನ ಹಲವೆಡೆ ಮಳೆಯಾಗಿದೆ. ನಗರದ ಅನೇಕ ಕಡೆ ವರುಣ ತಂಪೆರೆದಿದ್ದಾನೆ. ಗೊರಗುಂಟೆಪಾಳ್ಯ, ಜಾಲಹಳ್ಳಿ, ವಿದ್ಯಾರಣ್ಯಪುರ, ಹೆಬ್ಬಾಳ, ಯಲಹಂಕ, ಪೀಣ್ಯ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ದಾಸರಹಳ್ಳಿ, ಮಲ್ಲೇಶ್ವರಂ, ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬಕ್ಕೆ ರೈಲ್ವೆ ಇಲಾಖೆ ಬಂಪರ್ ಗಿಫ್ಟ್


 Advertisement 







 Advertisement 




Sign in to your account
Username or Email Address


Password

 Remember Me


