ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿಂದು ವರುಣನ ಆರ್ಭಟ ಮುಂದುವರಿಯಲಿದೆ. ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕರಾವಳಿ ಭಾಗದಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 30-22
ಮಂಗಳೂರು: 29-26
ಶಿವಮೊಗ್ಗ: 29-22
ಬೆಳಗಾವಿ: 28-21
ಮೈಸೂರು: 31-22ಮಂಡ್ಯ: 31-23
ಮಡಿಕೇರಿ: 24-18
ರಾಮನಗರ: 31-23
ಹಾಸನ: 28-21
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 31-22ಕೋಲಾರ: 32-22
ತುಮಕೂರು: 31-22
ಉಡುಪಿ: 29-26
ಕಾರವಾರ: 29-26
ಚಿಕ್ಕಮಗಳೂರು: 27-20
ದಾವಣಗೆರೆ: 31-23ಹುಬ್ಬಳ್ಳಿ: 29-22
ಚಿತ್ರದುರ್ಗ: 30-22
ಹಾವೇರಿ: 30-23
ಬಳ್ಳಾರಿ: 33-24
ಗದಗ: 31-23
ಕೊಪ್ಪಳ: 31-23ರಾಯಚೂರು: 33-25
ಯಾದಗಿರಿ: 33-26
ವಿಜಯಪುರ: 31-24
ಬೀದರ್: 30-23
ಕಲಬುರಗಿ: 32-25
ಬಾಗಲಕೋಟೆ: 32-24Sign in to your account
Username or Email Address


Password

 Remember Me


