ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಮಳೆ ಸಾಧ್ಯತೆಯಿದೆ ಇಲಾಖೆ ಮುನ್ಸೂಚನೆ ನೀಡಿದೆ.ರಾಜಧಾನಿ ಬೆಂಗಳೂರಿನಲ್ಲಿಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆ.ಗ್ರಾಮಾಂತರ, ಚಾಮರಾಜನಗರ, ರಾಮನಗರ ನಾಲ್ಕು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 29-25
ಶಿವಮೊಗ್ಗ: 30-22
ಬೆಳಗಾವಿ: 30-21
ಮೈಸೂರು: 29-22ಮಂಡ್ಯ: 30-22
ಮಡಿಕೇರಿ: 25-18
ರಾಮನಗರ: 29-22
ಹಾಸನ: 28-20
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 29-21ಕೋಲಾರ: 29-22
ತುಮಕೂರು: 29-22
ಉಡುಪಿ: 30-25
ಕಾರವಾರ: 30-25
ಚಿಕ್ಕಮಗಳೂರು: 27-20
ದಾವಣಗೆರೆ: 31-22ಹುಬ್ಬಳ್ಳಿ: 31-22
ಚಿತ್ರದುರ್ಗ: 29-22
ಹಾವೇರಿ: 32-23
ಬಳ್ಳಾರಿ: 34-24
ಗದಗ: 32-23
ಕೊಪ್ಪಳ: 33-23ರಾಯಚೂರು: 33-25
ಯಾದಗಿರಿ: 33-25
ವಿಜಯಪುರ: 32-23
ಬೀದರ್: 31-23
ಕಲಬುರಗಿ: 33-24
ಬಾಗಲಕೋಟೆ: 33-23Sign in to your account
Username or Email Address


Password

 Remember Me


