ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಸಂಚಾರ ಮಾಡುವ ಸವಾರರು ಅತ್ಯಂತ ಎಚ್ಚರ ಹಾಗೂ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕಿದೆ. ಏಕೆಂದರೆ, ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದಿಂದ ತುಸು ದೂರದಲ್ಲೇ 2 ಬೃಹತ್ ಬಂಡೆಗಳು (Boulder) ಅನಾಹುತಕ್ಕೆ ಬಾಯ್ತೆರೆದು ಕೂತಿವೆ.ಬೃಹತ್ ಬಂಡೆಗಳ ಕೆಳಭಾಗದ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಎರಡು ಬಂಡೆಗಳು ಕೂದಲೆಳೆ ಅಂತರದಲ್ಲಿ ನಿಂತಂತಿದೆ. ಮತ್ತೆ ಮಳೆಯಾದರೇ ಅಥವಾ ಬಿರುಗಾಳಿಗೆ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಆ ಕಿರಿದಾದ ರಸ್ತೆಯಲ್ಲಿ (Charmadi Ghat Road) ಬಂಡೆಗಳು ಕುಸಿದು ಬಿದ್ದರೆ ಮತ್ತೊಂದು ಬದಿ ಪ್ರಪಾತವಿರುವುದರಿಂದ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕಪಟ್ಟಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಪ್ಲಾನ್ – ಏನೇನು ತಯಾರಿ ನಡೆಯುತ್ತಿದೆ?ಒಂದು ವೇಳೆ ಟ್ರಾಫಿಕ್ ಜಾಮ್, ಸೆಲ್ಫಿ ಕ್ರೇಜ್, ಇನ್ಯಾವುದೋ ಕಾರಣಕ್ಕೆ ಟ್ರಾಫಿಕ್ ಜಾಮ್ ಆದ ಸಂದರ್ಭದಲ್ಲಿ ಕೆಳಗಡೆ ವಾಹನಗಳು ಇದ್ದರೇ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರದಿಂದಿರುವಂತೆ ಅಲ್ಲಿನ ಸ್ಥಳೀಯರೇ ಮನವಿ ಮಾಡುತ್ತಿದ್ದಾರೆ.ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಕಲ್ಲುಗಳನ್ನ ಸ್ಥಳಾಂತರಿಸಿದರೇ ಅಥವಾ ಕೆಳಗೆ ಇಳಿಸಿದ್ರೆ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಹೆದ್ದಾರಿ ಪ್ರಾಧಿಕಾರದ (Highway Authority) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ – ಎರಡನೇ ಹಂತದ ಶೋಧಕಾರ್ಯ, ಗಂಗಾವಳಿ ನದಿಯಲ್ಲಿ ಲಾರಿಯ ಅವಶೇಷ ಪತ್ತೆ Sign in to your account
Username or Email Address


Password

 Remember Me


