ಸ್ಯಾಂಡಲ್‌ವುಡ್ (Sandalwood) ಮಾತ್ರವಲ್ಲದೇ ಪರಭಾಷೆಗಳಲ್ಲೂ ಮಿಂಚಿದ ಕನಸಿನ ರಾಣಿ ಮಾಲಾಶ್ರೀ (Malashree) ಪುತ್ರಿ ರಾಧನಾ ರಾಮ್ (Radhana Ram) ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ರಾಧನಾ ದುಬೈಗೆ (Dubai) ಹಾರಿದ್ದಾರೆ.ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಮಾಲಾಶ್ರೀ ಇತ್ತೀಚೆಗೆ ತಮ್ಮ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದರು. ತೆರೆಯ ಮೇಲೆ ಮಿಂಚಲು ಅಮ್ಮನಂತೆಯೇ ರಾಧನಾ ಕೂಡ ಭರ್ಜರಿ ತಯಾರಿ ಮಾಡ್ತಿದ್ದಾರೆ. ಈಗಾಗಲೇ ತಮ್ಮ ಮುದ್ದು ಮುದ್ದಾದ ಫೋಟೋಶೂಟ್ ಮೂಲಕ ರಾಧನಾ ಗಮನ ಸೆಳೆದಿದ್ದಾರೆ. ಸದ್ಯ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ರಾಧನಾ ದುಬೈಗೆ ಹಾರಿದ್ದಾರೆ.  A post shared by Radhana Ram / Anannya Ramu (@radhanaram_)ದುಬೈನ ಸುಂದರ ತಾಣಗಳಿಗೆ ನಟಿ ಭೇಟಿ ಕೊಟ್ಟಿದ್ದಾರೆ. ಅಮ್ಮ ಮಾಲಾಶ್ರೀ ಅವರ ಜೊತೆ ದುಬೈ ಪ್ರವಾಸದಲ್ಲಿ ರಾಧನಾ ರಾಮ್ ಮಿಂಚಿದ್ದಾರೆ. ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಹಾಟ್ ಆಗಿ ರಾಧನಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಕಿಶೋರ್ ಗೆ ಮಹತ್ವದ ಪಾತ್ರ  A post shared by Radhana Ram / Anannya Ramu (@radhanaram_)ಇನ್ನೂ ತರುಣ್ ಸುಧೀರ್ (Tarun Sudhir) ನಿರ್ದೇಶನದ (Direction) ಸಿನಿಮಾ ಮೂಲಕ ರಾಧನಾ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. 
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


