ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ನಟ ಚಂದು ಗೌಡ (Actor Chandu Gowda) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ಮುದ್ದು ಮಗಳ ಆಗಮನದ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗೆ ಮುದ್ದಾದ ಫೋಟೋಶೂಟ್ ಮಾಡಿಸಿ, ಮಗಳ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.ಸಾಕಷ್ಟು ಸೀರಿಯಲ್, ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ತ್ರಿನಯನಿ ಖ್ಯಾತಿಯ ಚಂದು ಗೌಡ 2020ರಲ್ಲಿ ಬಹುಕಾಲದ ಶಾಲಿನಿ (Shalini) ಜೊತೆ ಹಸೆಮಣೆ (Wedding) ಏರಿದ್ದರು. 2022ರಲ್ಲಿ  ಚಂದು ಮನೆಗೆ ಆಗಸ್ಟ್‌ನಲ್ಲಿ ಹೆಣ್ಣು ಮಗುವಿನ ಆಗಮನವಾಗಿತ್ತು. ಇದೀಗ ವಿಶೇಷವಾದ ರೀತಿಯಲ್ಲಿ ಮಗಳನ್ನು ಅಭಿಮಾನಿಗಳಿಗೆ ನಟ ಚಂದು ಪರಿಚಯಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ  A post shared by Chandu B Gowda (@im_chandugowda)ಕವಿತಾ ನಾಗಾರಾಜ್ ಫೋಟೋಗ್ರಾಫಿಯಲ್ಲಿ ಈ ಫೋಟೋಶೂಟ್ ಮೂಡಿ ಬಂದಿದೆ. ಸದ್ಯ ಚಂದು ಗೌಡ ಅವರ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ.  A post shared by Chandu B Gowda (@im_chandugowda)‌ʻಲಕ್ಷ್ಮಿ ಬಾರಮ್ಮ ಸೀರಿಯಲ್ʼ ಮೂಲಕ ಕನ್ನಡಿಗರ ಮನಗೆದ್ದ ನಟ ಚಂದು ಈಗ `ತ್ರಿಯನಿ’ (Trinayani Serial) ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


