ಹಾವೇರಿ: ಕೆರೆಯ ಆಳ ಗೊತ್ತಿಲ್ಲದೆ ಐವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ಕಾಲೇಜು (Medical College) ವಿದ್ಯಾರ್ಥಿ (Student) ಕೆರೆಯಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಹೊರ ವಲಯದಲ್ಲಿ ನಡೆದಿದೆ.ಹೊಸ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ, ಮೊದಲ ಬ್ಯಾಚ್‌ಗೆ ತರಗತಿ ಆರಂಭವಾಗಿತ್ತು. 15 ದಿನಗಳು ಕಳೆಯೋದ್ರಲ್ಲೆ ಇಂತಹ ದುರಂತ ಸಂಭವಿಸಿದೆ. ಕಾಲೇಜಿಗೆ ಪ್ರವೇಶ ಪಡೆದಿದ್ದ ಮೈಸೂರು ಮೂಲದ ವಿದ್ಯಾರ್ಥಿ ನೋಮನ್ ಪಾಷಾ ತಾನು ತಂಗಿರುವ ಹಾಸ್ಟೆಲ್ (Hostel) ಬಳಿಯ ಕೆರೆಗೆ ಈಜಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯಭಾನುವಾರ ರಜಾದಿನ ಹಿನ್ನೆಲೆ ನೋಮನ್ ಪಾಷಾ ಮತ್ತು ಸ್ನೇಹಿತರು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಚೌಡಮ್ಮನ ಕೆರೆಗೆ ಈಜಲು ಹೋಗಿದ್ದಾರೆ. ಕೆರೆಯಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಆಳ ಇದೆ ಎನ್ನುವುದನ್ನು ತಿಳಿದುಕೊಳ್ಳದೇ ಈಜಲು ಹಾರಿದ್ದಾರೆ. ಕೆರೆಯ ಆಳ ಹಾಗೂ ಕಲ್ಲು ಬರಿತ ಪ್ರದೇಶದಲ್ಲಿ ಜಿಗಿದ ಪರಿಣಾಮ ನೋಮನ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಇಂದು ಮೃತದೇಹ ಪತ್ತೆಯಾಗಿದೆ.ಗ್ರಾಮ ಪಂಚಾಯಿತಿ (Gram Panchayat) ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆಯ ಸುತ್ತಲೂ ಸೂಚನಾ ಫಲಕ ಹಾಗೂ ಕಬ್ಬಿಣದ ತಂತಿ ಬೇಲಿಯನ್ನು ಹಾಕಿಸಿ ಸುರಕ್ಷತೆ ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾಕಳೆದ 6 ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ ನೋಮನ್ ಪಾಷಾ, ಡಾಕ್ಟರ್ ಆಗಿ ತಾಯಿ, ತಮ್ಮ ಹಾಗೂ ತಂಗಿಯನ್ನು ಸಾಕಬೇಕು ಅಂತಾ ಕನಸು ಕಂಡಿದ್ದ. ತನ್ನ ತಾಯಿ ಮಗನ ಓದಿಗಾಗಿ ಸಾಲ ಮಾಡಿ 68 ಸಾವಿರ ಹಣ ಕೊಟ್ಟಿದ್ದರು. ಆದ್ರೆ ಈಗ ಸಾಲ ಮಾಡಿದ ಹಣದ ಜೊತೆಗೆ ಮಗನೂ ಇಲ್ಲವಾಗಿದ್ದಾನೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


