ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವ ಯತ್ನ ಮಾಡಲಾಗುತ್ತಿದೆಯಾ ಎಂಬ ಅನುಮಾನವೊಂದು ಎದ್ದಿದೆ.ಸಾಗರದಲ್ಲಿ ಭಜರಂಗದಳ (Bhajarangdal) ಕಾರ್ಯಕರ್ತನ ಮೇಲೆ ದಾಳಿ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ರೀತಿಯಲ್ಲೇ ದುಷ್ಕರ್ಮಿ ಸಮೀರ್ ಎಂಬಾತ ಸುನೀಲ್ ಮೇಲೆ ತಲ್ವಾರ್‍ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಕೂದಲೆಳೆ ಅಂತರದಲ್ಲಿ ಭಜರಂಗದಳದ ಸುನೀಲ್ ಪಾರಾಗಿದ್ದಾರೆ.ಶಿವಮೊಗ್ಗದಲ್ಲಿ ಭಾನುವಾರ ನಡೆದ ಶೌರ್ಯ ಸಂಚಲನದಲ್ಲಿ ಸುನೀಲ್ (sunil) ಭಾಗಿಯಾಗಿದಲ್ರು. ಈ ವೇಳೆ ಸುನೀಲ್‍ಗಾಗಿ ಕಾದು ಕುಳಿತು ಸಮೀರ್ ದಾಳಿ ನಡೆಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಮಲಗಿದ್ದ ನಾಯಿಯ ಮೇಲೆ ಕಾರ್ ಹತ್ತಿಸಿ ವಿಕೃತಿ ಮೆರೆದ ಭೂಪಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ ಪ್ರಕರಣ ಸಂಬಂಧ ಸಾಗರಟೌನ್ ಠಾಣೆಯ ಮುಂಭಾಗ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ ಸಮೀರ್ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಪ್ರತಿಭಟನಾಕಾರರನ್ನ ಸಮಾಧಾನ ಪಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


