ಹುಬ್ಬಳ್ಳಿ: ಅತ್ತೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾದರಿಯಲ್ಲಿ ಅಳಿಯ ರಜತ್ ಉಳ್ಳಾಗಡ್ಡಿಮಠ್ (Rajat Ullagaddimath) ಸಹ ರಾಜಕೀಯ ಶುರು ಮಾಡಿದ್ದಾರೆ. ಅತ್ತೆ ಕುಕ್ಕರ್ ಕೊಟ್ಟು ಸುದ್ದಿಯಾಗಿದ್ದರೆ ಈಗ ಅಳಿಯ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ ಜೊತೆಗೆ ಶರ್ಟ್ ಕೊಟ್ಟು ಸುದ್ದಿಯಾಗುತ್ತಿದ್ದಾರೆ.ಚುನಾವಣಾ ಘೋಷಣೆಗೂ ಮುನ್ನವೇ ಹುಬ್ಬಳ್ಳಿ-ಧಾರವಾಡ (Hubballi – Dharwad) ಕೇಂದ್ರ ಕ್ಷೇತ್ರದಲ್ಲಿ ಈಗ ಕುಕ್ಕರ್ ಜೊತೆಗೆ ಅಡುಗೆ ಪಾತ್ರೆ ರಾಜಕೀಯ ಜೋರಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಪ್ರಬಲ ಪೈಪೋಟಿ ನೀಡಲು ಸತತ ಪ್ರಯತ್ನ ನಡೆಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಪ್ತರು ಸಹ ಆಗಿರುವ ಇವರು ಈ ಬಾರಿ ಶೆಟ್ಟರ್ ಎದುರು ಚುನಾವಣೆಗೆ ನಿಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಕೊಡುಗೆಗಳನ್ನು ನೀಡಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸೆಂಟ್ರಲ್ ಕ್ಷೇತ್ರದ ಎಲ್ಲಾ ಮನೆಗಳಿಗೂ ಕುಕ್ಕರ್, ದೋಸೆ ಹಂಚು, ಅಡುಗೆ ಪಾತ್ರೆಗಳು, ಶರ್ಟ್, ಕ್ಯಾಲೆಂಡರ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯಅಷ್ಟೇ ಅಲ್ಲದೆ ಕ್ಷೇತ್ರದ ಎಲ್ಲಾ ಆಟೋಗಳಿಗೆ ಟಾಪ್ ಕವರ್ ಸಹ ಕೊಡುಗೆ ನೀಡುತ್ತಿದ್ದಾರೆ. ರಜತ್ ಬೆಂಬಲಿಗರು ಈಗ ಕುಕ್ಕರ್ ಹಂಚುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


