ಮೈಸೂರು: ಸ್ಯಾಂಟ್ರೋ ರವಿ (Santro Ravi) ಹೆಸರು ಈಗ ಸದ್ಯ ರಾಜ್ಯ ರಾಜಕೀಯದಲ್ಲೇ ಅತೀ ಹೆಚ್ಚು ಸದ್ದು ಮಾಡ್ತಿರೋ ಹೆಸರು. ಮೈಸೂರು ಭಾಗದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಕೇಳಿ ಬರ್ತಿದ್ದ ಈ ಹೆಸರು ಈಗ ವಿಧಾನಸೌಧ (Vidhanasoudha) ಕ್ಕೆ ಸಿಡಿಲು ಬಡಿಸುತ್ತಿದೆ.ಮಂಜುನಾಥ್ (Manjunath) ಅಲಿಯಾಸ್ ಸ್ಯಾಂಟ್ರೋ ರವಿ ಮೈಸೂರು ಭಾಗದಲ್ಲಿ ವೇಶ್ಯಾವಾಟಿಕೆಗೆ ಕುಖ್ಯಾತಿ ಪಡೆದವನು. ಸುಮಾರು 20 ವರ್ಷಗಳಿಂದ ಇದೇ ದಂಧೆಯಲ್ಲಿದ್ದು ಹತ್ತಾರು ಕೇಸ್ ಹಾಕಿಸಿಕೊಂಡು ಹಲವು ಬಾರಿ ಜೈಲು ಪಾಲಾಗಿ ಬಂದವನು. ಈಗಲೂ ಇವನ ಮೇಲೆ ಇನ್ನೂ ಹಲವು ಕೇಸ್‍ಗಳಿವೆ.ಸ್ಯಾಂಟ್ರೋ ರವಿ, ಹೊರ ರಾಜ್ಯದ ಹುಡುಗಿಯರನ್ನು ಮೈಸೂರು, ಬೆಂಗಳೂರಿಗೆ ಕರೆಸಿ ವ್ಯವಹಾರ ಮಾಡುತ್ತಿದ್ದ. ಹುಡುಗಿಯರ ಅಂದ ಚೆಂದದ ಅನುಸಾರ ಆ ಹುಡುಗಿಗೆ ಒಂದೊಂದು ರೇಟ್ ಫಿಕ್ಸ್ ಮಾಡುತ್ತಿದ್ದ. ಆ ಹುಡುಗಿಯರಿಗೆ ಕಾರ್ ಗಳ ಕಂಪನಿ ಹೆಸರು ಇಟ್ಟು ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿಬಿಎಂಡಬ್ಯೂ, ಇನೋವಾ, ಬೆಂಜ್, ಎಕ್ಸ್ ಯುವಿ ಕಾರ್ ಬ್ರಾಂಡ್‍ಗಳ ಹೆಸರನ್ನು ಹುಡುಗಿಯರ ಅಂದ ಚೆಂದದ ಅನುಸಾರ ಅವರಿಗೆ ಇಡುತ್ತಿದ್ದ. ಒಳ್ಳೆಯ ಬ್ರಾಂಡ್ ಕಾರ್ ಗಳಿಗೆ ಹೇಗೆ ಜಾಸ್ತಿ ಬೆಲೆಯೋ ಅದೇ ರೀತಿ ಕಾರ್ ಬ್ರಾಂಡ್ ಇಟ್ಟುಕೊಂಡ ಹುಡುಗಿಗೂ ಜಾಸ್ತಿ ಬೆಲೆ ಇರುತ್ತಿತ್ತು. ಇದು ಸ್ಯಾಂಟ್ರೋ ರವಿ ವ್ಯವಹಾರದ ಗುಟ್ಟು. ಇದನ್ನೂ ಓದಿ: ಅತ್ಯಾಚಾರ ಎಸಗಿ ಮದ್ವೆ ಆಗಿದ್ದ – ಜಡ್ಜ್ ಮುಂದೆ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆತನ್ನ ವಾಟ್ಸಾಪ್ ಸ್ಟೇಟಸ್‍ (Whatsapp Status) ನಲ್ಲೇ ಆ ಹುಡುಗಿಯರ ಫೋಟೋ ಹಾಕಿ ಗಿರಾಕಿಗಳಿಗೆ ಆಹ್ವಾನ ನೀಡುತ್ತಿದ್ದ. ಗಿರಾಕಿಗಳು ತಮಗೆ ಬೇಕಾದ ಹುಡುಗಿಯನ್ನು ಅಲ್ಲೆ ಸೆಲೆಕ್ಟ್ ಮಾಡಿಕೊಂಡು ವ್ಯವಹಾರ ಮಾತಾಡುತ್ತಿದ್ದರು. ವ್ಯವಹಾರ ಕುದುರಿದರೆ ಆ ಹುಡುಗಿಯನ್ನು ಗಿರಾಕಿ ಹೇಳಿದ ಸ್ಥಳಕ್ಕೆ ಕಳಿಸುತ್ತಿದ್ದ ಎಂಬ ಅಂಶಗಳು ಈಗ ಬಯಲಾಗುತ್ತಿವೆ. ಸದ್ಯ ಸ್ಯಾಂಟ್ರೋ ರವಿಯ ವ್ಯವಹಾರದ ಚಿಹ್ನೆಗಳು, ವ್ಯವಹಾರ ಶೈಲಿ ಎಲ್ಲವೂ ಬೆಳಕಿಗೆ ಬರುತ್ತಿದ್ದ ಇವನೂ ಹೈಟೆಕ್ ಆಗಿ ವ್ಯವಹಾರ ನಡೆಸುತ್ತಿದ್ದ ಎಂಬುದಂತೂ ಸ್ಪಷ್ಟವಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


