ಮೈಸೂರು: ತಲೆಮರೆಸಿಕೊಂಡು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿರೋ ಮೈಸೂರಿನ (Mysuru) ಸ್ಯಾಂಟ್ರೋ ರವಿ (Santro Ravi) ಕೇಸ್ ಬಗೆದಷ್ಟೂ ರೋಚಕವಾಗಿದೆ. ಸ್ಯಾಂಟ್ರೋ ರವಿಯ ಕರಾಳ ಮುಖ ಅನಾವರಣ ಆಗ್ತಿದೆ.ಸಂತ್ರಸ್ತೆಯೂ ಆಗಿರೋ ಸ್ಯಾಂಟ್ರೋ ರವಿ ಪತ್ನಿ ಮೈಸೂರಿನ ಜಿಲ್ಲಾ ನ್ಯಾಯಾಧೀಶರ ಮುಂದೆ ಐಪಿಸಿ (IPC) ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ`ಅತ್ಯಾಚಾರ ಎಸೆಗಿ ಮದುವೆಯಾದ (Marriage) ರವಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಮಾಡಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ನನ್ನ ತಂಗಿಯ ಮೇಲೂ ದೈಹಿಕ ಹಲ್ಲೆ ಮಾಡಿದ್ದಾನೆ’ ಅಂತಾ ಪತ್ನಿ ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬಸ್‌ ಟೈರ್‌ ಪಂಕ್ಚರ್‌ ಆಗಿ ಮತ್ತೊಂದು ಬಸ್‌ಗೆ ಡಿಕ್ಕಿ – 40 ಸಾವು, 78 ಮಂದಿಗೆ ಗಾಯಆದ್ದರಿಂದ ಸ್ಯಾಂಟ್ರೋ ರವಿಗೆ ನಿರೀಕ್ಷಣಾ ಜಾಮೀನು ಸಿಗೋದು ಕಷ್ಟಸಾಧ್ಯವಾಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಸ್ಯಾಂಟ್ರೋ ರವಿ, ಮೈಸೂರು, ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸಿದ್ದಾನೆ. ದಂಧೆಯಲ್ಲಿದ್ದ ಯುವತಿಗೆ ರ‍್ಯಾಡೋ ವಾಚ್ ಗಿಫ್ಟ್ ಸಹ ಕೊಟ್ಟಿರೋದಕ್ಕೆ ಸಾಕ್ಷಿಗಳು ಲಭ್ಯವಾಗಿವೆ.ಇನ್ನೂ ವರ್ಗಾವಣೆ ದಂಧೆಯಲ್ಲೂ ಕಿಂಗ್‌ಪಿನ್ ಆಗಿದ್ದು, ಸಚಿವರ ಲೇಟರೆಡ್‌ಗಳು ಪತ್ತೆಯಾಗಿವೆ. ವರ್ಗಾವಣೆ ಜೊತೆಗೆ ಪ್ರಮೋಷನ್ ಮಾಸ್ಟರ್ ಆಗಿದ್ದು, ಇದರಿಂದ ಬಂದ ಹಣವನ್ನು ಸ್ಟೇಟಸ್‌ಗೆ ಅಪ್ಲೋಡ್ ಮಾಡಿಕೊಂಡಿದ್ದಾನೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.ಇದಿಷ್ಟೇ ಅಲ್ಲದೆ, ಸ್ಯಾಂಟ್ರೋ ರವಿ ಬಳಿ ಕಪ್ಪು ಬಣ್ಣದ ಪಿಸ್ತೂಲ್ ಇರೋದು ಬೆಳಕಿಗೆ ಬಂದಿದೆ. ಸಂಚಲನ ಅಂತ ವಾರಪತ್ರಿಕೆ ನಡೆಸ್ತಿದ್ದು, ಪತ್ರಕರ್ತನ ಸೋಗು ಹಾಕಿದ್ದಾನೆ. ಈ ಮಧ್ಯೆ ಸ್ಯಾಂಟ್ರೋ ರವಿ ಆಗುವ ಮುನ್ನ ಮಂಜುನಾಥನಾಗಿದ್ದ ಈತ ಮಂಡ್ಯದಲ್ಲಿ ಕಾರ್‌ಗಳನ್ನು ಕದ್ದು, ಕಾಲೇಜು ಹುಡುಗಿಯರ ಮುಂದೆ ಶೋಕಿ ತೋರಿಸ್ತಿದ್ದ. ಒಮ್ಮೆ ಮೈಸೂರು ಪೊಲೀಸರು ಮನೆಗೆ ನುಗ್ಗಿ ಒದ್ದು ರ‍್ಕೊಂಡು ಹೋಗಿದ್ರು. ಅಲ್ಲದೆ, ಈತ 4 ಮದುವೆ ಆಗಿದ್ದ ಅನ್ನೋ ಸತ್ಯ ಪೊಲೀಸ್ ತನಿಖೆ ವೇಳೆ ಬಯಲಿಗೆ ಬಂದಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


