ಬೆಂಗಳೂರು: ಕಳೆದ 6 ತಿಂಗಳಲ್ಲಿ ರಾಜ್ಯಾದ್ಯಂತ ಅಪೌಷ್ಠಿಕತೆಯಿಂದ (Malnutrition) ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ 1,89,958 ಮಕ್ಕಳು ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ತಪ್ಪಿಸಲು ನಯಾ ಪ್ಲಾನ್- 273 ಕೋಟಿ ವೆಚ್ಚದಲ್ಲಿ ಬರಲಿದೆ ಫ್ರೀ ಕಾರಿಡಾರ್ ರಸ್ತೆ1,80,130 ಮಕ್ಕಳು ಮಧ್ಯಮ ಪ್ರಮಾಣದ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ, 9,828 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಸರ್ಕಾರ ಮಕ್ಕಳ (Children) ಪೌಷ್ಠಿಕತೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡ್ತಿದ್ದರೂ ಅಪೌಷ್ಠಿಕತೆಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ ಅನ್ನೋ ಆರೋಪ ಕೇಳಿಬರ್ತಿದೆ. ಇದನ್ನೂ ಓದಿ: 98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆ – ಎಸ್ಕಾರ್ಟ್ ನೀಡಿ ಮನೆಗೆ ಕಳುಹಿಸಿದ ಪೊಲೀಸರುಅದರಲ್ಲೂ ಮೈಸೂರು (Mysuru) ಮತ್ತು ಬೀದರ್ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಇದರಿಂದ ಸರ್ಕಾರ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಅದಕ್ಕಾಗಿ ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ, 150 ಮಿಲಿ ಹಾಲು ನೀಡಲಾಗುತ್ತೆ ಎಂದು ಸಿಎಂ (Chief Minister) ಹೇಳಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


