ಕಲಬುರಗಿ: ಟೈರ್ ಬ್ಲಾಸ್ಟ್ (tyre Blast) ಆಗಿ ಮದ್ಯ (Alcohol) ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿಯಾದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಹಸನಾಪುರ ಗ್ರಾಮದ ಬಳಿ ನಡೆದಿದೆ.ಕಲಬುರಗಿ ನಗರದ ಗೋದಮಿನಿಂದ ಜೇವರ್ಗಿ ಪಟ್ಟಣದ ವೈನ್ ಶಾಪ್‍ಗಳಿಗೆ ಮದ್ಯವನ್ನು ಸರಬರಾಜು ಮಾಡಲು ಹೋಗುತ್ತಿದ್ದ ವಾಹನದ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮವಾಗಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ನಾಶವಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!ಇನ್ನೂ ಘಟನೆ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ. ಚಾಲಕನಿಗೆ ಹಾಗೂ ಕ್ಲಿನರ್ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕಲಬುರಗಿ ನಗರ ಸಂಚಾರಿ 1 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:  ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


