ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಲಾಭ ಇರೋದ್ರಿಂದ ನನ್ನ ತೇಜೋವಧೆ ಮಾಡುತ್ತಿದ್ದಾರೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.ಸ್ಯಾಂಟ್ರೋ ರವಿ (Santro Ravi) ವಿಚಾರದಲ್ಲಿ ಕುಮಾರಸ್ವಾಮಿ (HD Kumaraswamy) ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಅನೇಕ ಆರೋಪಗಳನ್ನ ಮಾಡಿದ್ದಾರೆ. ನನ್ನದೇನು ತೊಂದರೆ ಇಲ್ಲ. ಈಗಾಗಲೇ ಡಿಜಿ-ಐಜಿ, ಮೈಸೂರು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಸ್ಯಾಂಟ್ರೋ ಯಾರು ಏನು ಅಂತ ಆತನನ್ನ ಕರೆದುಕೊಂಡು ವಿಚಾರಣೆ ಮಾಡಲು ಹಾಗೂ ಅವನ ಮೇಲೆ ಎಷ್ಟು ಕೇಸ್ ಇದೆ. ಆತನ ಹಿನ್ನೆಲೆ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಿದ್ದೇನೆ. ಸಿಎಂ ಅವರ ಗಮನಕ್ಕೂ ತಂದಿದ್ದೇನೆ ಎಂದರು. ಇದನ್ನೂ ಓದಿ: ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡೋದು ಬೇಡ. ಅನೇಕರು ನಮ್ಮ ಮನೆಗೆ ಬಂದು ಫೋಟೋ ತೆಗೆಸಿಕೊಂಡಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಸಾವಿರಾರು ಜನ ಅವರ ಜೊತೆ ಫೋಟೋ (Photo) ತೆಗೆದುಕೊಂಡು ಇರುತ್ತಾರೆ. ನಾವು ಕುಮಾರಸ್ವಾಮಿ ಫೋಟೋ ಇಟ್ಟುಕೊಂಡು ಆರೋಪ ಮಾಡಿಲ್ಲ. ಕುಮಾರಸ್ವಾಮಿ ನನ್ನ ಜೊತೆ ಇರೋ ಫೋಟೋ ಇಟ್ಟುಕೊಂಡು ನನ್ನ ತೇಜೋವಧೆ ಮಾಡೋದು ಸರಿಯಲ್ಲ. ಇದರಿಂದ ಕುಮಾರಸ್ವಾಮಿ ಏನು ಲಾಭ ನನಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ನನ್ನ ಮನೆಗೆ ಬಂದರೂ ಯಾರು ಹಣದ ಆಮಿಷ ತೊರಿಸೋ ಧೈರ್ಯ ಮಾಡಿಲ್ಲ. ಸಾರ್ವಜನಿಕ ಜೀವನದಲ್ಲಿ ನಾನು ಹೇಗೆ ಬದುಕಬೇಕು ಹಾಗೆ ಬದುಕಿದ್ದೇನೆ. ಹೀಗೆ ಸಾರ್ವಜನಿಕವಾಗಿ ಹೀಗೆ ತೇಜೋವಧೆ ಮಾಡಿದ್ರಿಂದ ಕುಮಾರಸ್ವಾಮಿ ಏನೋ ಲಾಭ ಇದೆ ಅನ್ನಿಸುತ್ತದೆ ಅಂತ ಕುಮಾರಸ್ವಾಮಿ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


