ಬೆಂಗಳೂರು: ಹಿರಿಯ ಪತ್ರಕರ್ತ (Senior Journalist), ಕನ್ನಡಪ್ರಭ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ಕೆ. ಸತ್ಯನಾರಾಯಣ (K Sathyanarayana) ಅವರ ಅಂತ್ಯಕ್ರಿಯೆ ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ನೆರವೇರಿತು.ಶ್ರೀಯುತರ ಪಾರ್ಥೀವ ಶರೀರವನ್ನು ಜಯನಗರ ನಿವಾಸದಿಂದ ಚಾಮರಾಜಪೇಟೆ ರುದ್ರಭೂಮಿಗೆ ತರಲಾಯ್ತು. ಬ್ರಾಹ್ಮಣ ಸಂಪ್ರದಾಯದಂತೆ ಸತ್ಯನಾರಾಯಣ ಅವರ ಅಣ್ಣನ ಮಗ ವಾಸುದೇವ್ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿದ್ರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸತ್ಯನಾರಾಯಣ ಅವ್ರು ಪಂಚಭೂತಗಳಲ್ಲಿ ಲೀನವಾದ್ರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪಇದಕ್ಕೂ ಮುನ್ನ ಸಕಲ ಪೊಲೀಸ್ ಗೌರವಗಳೊಂದಿಗೆ ಶ್ರೀಯುತರಿಗೆ ಗೌರವ ಸಮರ್ಪಣೆ ಮಾಡಲಾಯ್ತು. ಸತ್ಯನಾರಾಯಣ ಅವರ ಪತ್ನಿ, ಮಗಳು, ಕುಟುಂಬಸ್ಥರು, ಶಿಷ್ಯಂದಿರು ಹಾಗೂ ಅಪಾರ ಪ್ರಮಾಣದ ಓದುಗ ಬಳಗವನ್ನ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ
ಕೆ. ಸತ್ಯನಾರಾಯಣ ಅವರು ಭಾನುವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸವಿದ್ದ ಅವರು ಆದರ್ಶ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನಲ್ಲೂ ವೆಂಕಮ್ಮ, ಸತ್ಯನಾರಾಯಣ ದಂಪತಿ ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದರು. ಕನ್ನಡದ ಹಲವು ಹೆಸರಾಂತ ಪತ್ರಕರ್ತರನ್ನ ಸತ್ಯನಾರಾಯಣ ಅವರು ಬೆಳೆಸಿದ್ದರು. ಸತ್ಯನಾರಾಯಣ ಅವರ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪತ್ನಿ ವೆಂಕಮ್ಮ, ಮಗಳು ಅಪೂರ್ವರನ್ನು ಅಗಲಿದ್ದಾರೆ. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಪಬ್ಲಿಕ್ ಟಿ.ವಿ (Public TV) ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


