ಬಿಗ್ ಬಾಸ್ ಸೀಸನ್ 9ರ ವಿನ್ನರ್ (Bigg Boss Kannada 9) ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ರೂಪೇಶ್ ಆಟಕ್ಕೆ ಇಡೀ ಕರ್ನಾಟಕ ಜನತೆಯ ಮೆಚ್ಚುಗೆ ಸೂಚಿಸಿದ್ದಾರೆ. ತಾಯ್ನಾಡು ಮಂಗಳೂರಿಗೆ ಕಾಲಿಟ್ಟಿರುವ ರೂಪೇಶ್, ತಮ್ಮ ಗೆಲುವನ್ನು ಕೊರಗಜ್ಜನ ದೇವರಿಗೆ ಸಮರ್ಪಿಸಿದ್ದಾರೆ. ಕೊರಗಜ್ಜನ (Koragajja) ಸನ್ನಿಧಾನಕ್ಕೆ ರೂಪೇಶ್‌ ಭೇಟಿ ನೀಡಿದ್ದಾರೆ.ಒಟಿಟಿಯಿಂದ ಟಿವಿ ಬಿಗ್ ಬಾಸ್ ಶೋನ ವಿನ್ನರ್ ಆಗಿ ರೂಪೇಶ್ ಶೆಟ್ಟಿ (Roopesh Shetty) ಜಯಭೇರಿ ಬಾರಿಸಿದ್ದಾರೆ. ಮಂಗಳೂರಿಗೆ (Mangalore) ಅದ್ದೂರಿಯಾಗಿ ಎಂಟ್ರಿ ಕೂಡ ಪಡೆದಿದ್ದಾರೆ. ಈ ವೇಳೆ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಪಕ್ಷ ಟಾಪ್ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ಆದರೆ ಬಿಗ್ ಬಾಸ್‌ನಲ್ಲಿ ನನ್ನನ್ನು ಅವರೇ ಗೆಲ್ಲಿಸಿದ್ದಾರೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ  A post shared by Roopesh Shetty (@roopesh_shetty_official)ಕರಾವಳಿ ಮಂಗಳೂರಿಗೆ ಬಂದ ರೂಪೇಶ್ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ಅದು ಅವರಿಗೆ ಹೆಚ್ಚು ಸಂತಸ ತಂದಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನನಗೆ ಹುಲಿ ವೇಷ ಎಂದರೆ ಇಷ್ಟ. ತುಳುನಾಡಿನ ಈ ಸಂಸ್ಕೃತಿಕ ಕಲೆಯನ್ನು ಬಿಗ್ ಬಾಸ್ ಮನೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಇಲ್ಲಿಯೂ ಹುಲಿವೇಷವನ್ನು ನನ್ನ ಸ್ನೇಹಿತರು ಪ್ಲ್ಯಾನ್ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ತಾವು ಗೆದ್ದಿರುವ ಹಣದಲ್ಲಿ ಕೊರಗಜ್ಜ ದೈವಕೋಲ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯದಲ್ಲೇ ದೈವಾರಾಧನೆ ಕಾರ್ಯರೂಪಕ್ಕೆ ಬರಲಿದೆ.ಬಿಗ್ ಬಾಸ್‌ನ ಗೆಲುವಿನ ಸಕ್ಸಸ್ ನಂತರ ರೂಪೇಶ್ ಶೆಟ್ಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ತುಳು, ಕನ್ನಡ, ತೆಲುಗು ಸಿನಿಮಾಗಳಲ್ಲೂ ರೂಪೇಶ್ ಕಾಣಿಸಿಕೊಳ್ಳಲಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


