ಬೆಂಗಳೂರು: ಕೇಕ್ ಶಾಪ್ (Cake Shop) ಮುಂದೆ ಪಾರ್ಕಿಂಗ್ (Parking) ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮ್ಯಾನೇಜರ್ (Manger) ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದಿರಾ ನಗರದ ಸ್ಮೂರ್ ಕೇಕ್ ಅಂಗಡಿ ಮುಂದೆ ನಡೆದಿದೆ.ಶೈಲೇಶ್ ಹಲ್ಲೆಗೊಳಗಾದ ಮ್ಯಾನೇಜರ್. ಸ್ಮೂರ್ ಕೇಕ್ ಶಾಪ್‍ನ ಮೇಲೆ ಹೌಸ್ ಆಫ್ ಕಾಮರ್ಸ್ ಎಂಬ ಬಾರ್ (Bar) ಇದೆ. ಬಾರ್‌ಗೆ ಕುಡಿಯಲು ಬಂದಿದ್ದ ಐದಾರು ಮಂದಿ ಕೇಕ್‌ ಶಾಪ್‌ ಮುಂದೆ ಕಾರ್ ಪಾರ್ಕ್ ಮಾಡಿದ್ರು. ಈ ವೇಳೆ ಶಾಪ್ ಮುಂದೆ ಪಾರ್ಕಿಂಗ್ ಮಾಡಿದ್ದನ್ನು ಶೈಲೇಶ್ ಪ್ರಶ್ನಿಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ತಂಡ ಶೈಲೇಶ್ ಮೇಲೆ ಹಲ್ಲೆ ನಡೆಸಿದೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್‌ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶಭಾನುವಾರ ರಾತ್ರಿ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಶೈಲೇಶ್ ತುಟಿ ಹಾಗೂ ಹಲ್ಲಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


