ಬೆಂಗಳೂರು: ಮೇಡಹಳ್ಳಿ ಫ್ಲೈ ಓವರ್ ಬಳಿ ಹಿಟ್ ಅಂಡ್ ರನ್ (Hit and Run) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಟೆಕ್ಕಿಯನ್ನು (Techie) ಬಂಧಿಸಲಾಗಿದೆ.ಹೊಸಕೋಟೆಯ ಸಂತೋಷ್ ಬಂಧಿತ ಆರೋಪಿ. ಆರೋಪಿ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್‌ ನಂಬರ್‌ ಆಧಾರದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸರು (KR Puram Traffic Police)  ಬಂಧಿಸಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವುಏನಿದು ಪ್ರಕರಣ?
ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದ ಭೀಕರತೆ ಎಷ್ಟಿತ್ತು ಅಂದರೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಜಖಂ ಆಗಿದ್ದು ಆಟೋ ರಿಕ್ಷಾದಲ್ಲಿದ್ದ ಹಸೀನಾ ಹಾಗೂ ಸುಮಯ್ಯ ಸ್ಥಳದಲ್ಲಿ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂ ಸಂಚಾರಿ ಪೊಲೀಸರು ಮೃತರನ್ನು ಹಾಗೂ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಹಿಟ್ ಮಾಡಿ ಇಬ್ಬರನ್ನ ಬಲಿ ಪಡೆದು ಪರಾರಿಯಾಗಿದ್ದ ಕಾರನ್ನು ಪತ್ತೆ ಮಾಡಲು ಆರಂಭಿಸಿದ್ದರು.ಕಾರು ಹೊಸಕೋಟೆ ಮಾರ್ಗವಾಗಿ ತೆರಳಿದ್ದು, ಟೋಲ್ ಬಳಿ‌ ಸಿಸಿಟಿವಿ ಚೆಕ್ ಮಾಡಿದ್ದರು. ಆ ವೇಳೆ ಮುಂದುಗಡೆ ಹೆಡ್‌ಲೈಟ್‌ ಜಾಗದಲ್ಲಿ ಸ್ವಲ್ಪ ಜಖಂಗೊಂಡಿದ್ದ ಆಲ್ಟೋ ಕಾರು ಪಾಸ್‌ ಆಗಿತ್ತು. ಈ ಕಾರಿನ ಚಾಲಕನೇ ಕೃತ್ಯ ಎಸಗಿದ್ದು ಎನ್ನುವುದು ದೃಢಪಟ್ಟಿತ್ತು.ಟೋಲ್ ಫೀಸ್ ಕಟ್ಟಿದ್ದ ವೇಳೆ ಚಾಲಕನ ಮೊಬೈಲ್ ನಂಬರ್ ಸಿಕ್ಕಿದೆ. ನಂಬರ್ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಹೊಸಕೋಟೆಯ ಮನೆಯಲ್ಲೇ ಇದ್ದ ಕಾರು ಚಾಲಕನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


