ಚಿಕ್ಕಬಳ್ಳಾಪುರ: ಸ್ಯಾಂಟ್ರೋ, ಹುಂಡೈ ಯಾವ್ಯಾವ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ ಎಂದು ಸಚಿವ ಅಶ್ವಥ್‌ ನಾರಾಯಣ್‌ (Ashwath Narayan) ತಿಳಿಸಿದರು.ಸ್ಯಾಂಟ್ರೋ ರವಿ (Santro Ravi) ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ, ಹುಂಡೈನಂತಹ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ. ಆದರೆ ಇಂತಹ ಬ್ರ್ಯಾಂಡ್‌ ಇದ್ದರೂ ಕ್ಲೀನ್ ಮಾಡಲು ನಾವು ಸಿದ್ಧರಿದ್ದೇವೆ. ಜತೆಗೆ ಇಂತಹ ಬ್ರ್ಯಾಂಡ್‌ಗಳನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ. ಯಾವ ಬ್ರ್ಯಾಂಡ್‌ಗಳಿಗೂ ಕಿಂಚಿತ್ತೂ ಗೌರವ ಅಲ್ಲ. ಸಮಾಜದಲ್ಲಿ ದುರುಪಯೋಗ ಪಡಿಸಿಕೊಳ್ಳುವವನನ್ನು ಕ್ಷಮಿಸಬಾರದು ಎಂದು ಹೇಳಿದರು. ಇದನ್ನೂ ಓದಿ: ಇದರಲ್ಲಿ ವಿಷ ಇದ್ರೆ? – UP ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ ಅಖಿಲೇಶ್ ಯಾದವ್ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್‌ಡಿಕೆ ಯಾರ‍್ಯಾರ ಜೊತೆ ಇದ್ರು ನಾವ್ ನೋಡಿಲ್ವಾ? ಹಾಗಂತ ನಾವ್ ಅವರ ಜೊತೆ ಸಂಬಂಧ ಇದ್ಯಾ ಅಂತ ಹೇಳೋಕೆ ಆಗುತ್ತಾ? ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಯನ್ನು ಗೌರವಿಸಲು ಸಾಧ್ಯವಿಲ್ಲ. ನಾವು ಯಾವ ನಾಯಕನನ್ನು ಉಳಿಸಿಕೊಳ್ಳಲು ಬಂದಿಲ್ಲ. ಜತೆಗೆ ಯಾರೇ ಭ್ರಷ್ಟಾಚಾರಿಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಡೀಸೆಲ್ ಮೇಲಿನ VAT ಹೆಚ್ಚಿಸಿದ ಹಿಮಾಚಲ ಪ್ರದೇಶ ಸರ್ಕಾರ – ಡೀಸೆಲ್ ಬೆಲೆ 3 ರೂ. ಏರಿಕೆ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


