ಬೆಂಗಳೂರು: ಇಷ್ಟು ದಿನ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿದ್ದ ಬಸ್‍ಗಳಿಂದ ಬಿಎಂಟಿಸಿ (BMTC) ಮಾನ ಮರ್ಯಾದೆ ಹರಾಜಾಗುತ್ತಿತ್ತು. ಆದರೆ ಈಗ ಕೆಟ್ಟು ನಿಲ್ಲುತ್ತಿದ್ದ ಆ ಡಕೋಟ ಬಸ್‍ಗಳೇ ಬಿಎಂಟಿಸಿ ಖಜಾನೆಯನ್ನು ತುಂಬಿಸುತ್ತಿದೆ.   ಸಿಲಿಕಾನ್ ಸಿಟಿಯಲ್ಲಿ (Bengaluru) ಪ್ರತಿನಿತ್ಯ ಒಂದಲ್ಲೊಂದು ಬಿಎಂಟಿಸಿ ಬಸ್ ಕೆಟ್ಟು ನಿಲ್ಲುತ್ತಿದೆ. ಇದಕ್ಕೆ ಕಾರಣ ಬಸ್‍ಗಳ ನಿರ್ವಹಣೆ ಅಲ್ಲ. ಬದಲಾಗಿ ಬಸ್‍ಗಳಿಗೆ ವಯಸ್ಸಾಗಿರೋದು ಎನ್ನುವುದು ಸಾಭೀತಾಗಿದೆ. ಈ ಹಿನ್ನೆಲೆ ಬಿಎಂಟಿಸಿ ತನ್ನ 990 ಹಳೆಯ ಬಸ್‍ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದೆ. ಆದರೆ ಈ ಗುಜರಿ ಸೇರಲಿರುವ ಬಸ್‍ಗಳು ಕೂಡ ಸಂಕಷ್ಟದಲ್ಲಿರುವ ಬಿಎಂಟಿಸಿ ಬೊಕ್ಕಸಕ್ಕೆ ವರದಾನವಾಗಲಿವೆ. ಇದನ್ನೂ ಓದಿ: 15 ವರ್ಷದಿಂದ ಮನೆಗಳ್ಳತನ – ಫಿಂಗರ್ ಫ್ರಿಂಟ್‌ನಿಂದ ತಗಲಾಕಿಕೊಂಡ ಖತರ್ನಾಕ್ ನೇಪಾಳಿ ಗ್ಯಾಂಗ್ಹಳೆಯ ಬಸ್‍ಗಳನ್ನ ನಿಗಮ ಗುಜರಿಗೆ ಹಾಕಲು ನಿರ್ಧರಿಸಿದ್ದು, ಈ ಪ್ರಕ್ರಿಯೆ ಮುಗಿಸಲು ಒಂದೆರಡು ಷರತ್ತುಗಳನ್ನು ಪೂರೈಸಬೇಕಿದೆ. ಸಾಮಾನ್ಯ ಬಸ್‍ಗಳಾದ್ರೇ 12 ವರ್ಷ ಸೇವಾವಧಿ ಮುಗಿಸಿರಬೇಕು ಅಥವಾ 8.5 ಲಕ್ಷ ಕಿಲೋಮೀಟರ್ ಸಂಚರಿಸಿರಬೇಕು. ವೋಲ್ವೋ ಬಸ್‍ಗಳಾದ್ರೆ 15 ವರ್ಷ ಸೇವಾವಧಿ ಮುಗಿಸಿರಬೇಕು ಅಥವಾ 10.5 ಲಕ್ಷ ಕಿಲೋಮೀಟರ್ ಸಂಚರಿಸಿರಬೇಕಿದೆ. ಇವೆರಡೂ ಷರತ್ತುಗಳು ಪೂರೈಸಿದ್ದಲ್ಲಿ ಮಾತ್ರ ಮತ್ತೊಂದಿಷ್ಟು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುತ್ತೆ. ಬಸ್‍ಗಳನ್ನು ಸರಿಪಡಿಸೋ ಸಾಧ್ಯತೆಯೇ ಇಲ್ಲ ಎಂದಾಗ ಗುಜರಿಗೆ ಹಾಕಲಾಗುತ್ತೆ. ಇದನ್ನೂ ಓದಿ: ಚೀನಾದಲ್ಲಿ ಭೀಕರ ರಸ್ತೆ ಅಪಘಾತ – 19 ಮಂದಿ ಬಲಿ2021 ಹಾಗೂ 22-23ರ ಸಾಲಿನ ಬರೋಬ್ಬರಿ 990 ಬಸ್‍ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ಒಪ್ಪಿಗೆ ಸೂಚಿಸಿದೆ. ಈ ಪೈಕಿ 290 ಬಸ್‍ಗಳು ಈಗಾಗಲೇ ಗುಜರಿಗೆ ಸೇರಿದ್ರೆ, ಈ ವರ್ಷದಲ್ಲಿ ಸುಮಾರು 400 ಬಸ್‍ಗಳು ಗುಜರಿ ಸೇರಲಿವೆ. ಗುಜರಿಗೆ ಹೋದ ಒಂದು ಬಸ್‍ನಿಂದ ಬಿಎಂಟಿಸಿಗೆ ಕನಿಷ್ಠ ಎರಡು ಲಕ್ಷ ರೂಪಾಯಿಯಿಂದ ಗರಿಷ್ಠ ಎರಡೂಕಾಲು ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಅಲ್ಲಿಗೆ 990 ಬಸ್‍ಗಳನ್ನು ಗುಜರಿಗೆ ಹಾಕ್ತಿರೋದ್ರಿಂದ ಬಿಎಂಟಿಸಿಗೆ ಕನಿಷ್ಠ 19 ಕೋಟಿ 80 ಲಕ್ಷ ರೂಪಾಯಿಯಿಂದ 23 ಕೋಟಿ ರೂಪಾಯಿವರೆಗೂ ಆದಾಯ ಉತ್ಪತ್ತಿಯಾಗುತ್ತಿದೆ. ಮತ್ತೊಂದೆಡೆ, ಗುಜರಿಗೆ ಹಾಕಲಾಗ್ತಿರೋ ಬಸ್‍ಗಳಲ್ಲಿನ ಉಪಯುಕ್ತ ಬಿಡಿ ಭಾಗಗಳನ್ನು ಬಿಎಂಟಿಸಿ ತಾನೇ ಉಳಿಸಿಕೊಳ್ಳುತ್ತಿದೆ. ಎಲ್ಲ ಉಪಯುಕ್ತ ವಸ್ತುಗಳನ್ನು ತೆಗೆದುಕೊಂಡ ನಂತರ ಗುಜರಿಗೆ ಹಾಕಲಾಗುತ್ತಿದೆ. ಬಸ್‍ನಲ್ಲಿರುವ ಅಲುಮಿನಿಯಂ ಹಾಗೂ ಸ್ಟೈನ್‍ಲೆಸ್ ಸ್ಟೀಲ್ ಮಾತ್ರ ಗುಜರಿಗೆ ಹೋಗ್ತಿರೋದ್ರಿಂದ ಅದೂ ಕೂಡ ರೀಸೈಕಲ್ ಆಗ್ತಿದೆ. ಕೇಂದ್ರ ಸರ್ಕಾರದ ಎಂಎಸ್‍ಟಿಸಿ ಮುಖಾಂತರ ಬಸ್‍ಗಳನ್ನು ಗುಜರಿಗೆ ಹಾಕಲು ಹರಾಜು ಮಾಡೋದ್ರಿಂದ ಎಲ್ಲಿಯೂ ಕಾನೂನು ಬಾಹಿರ ಕೆಲಸಗಳಾಗುತ್ತಿಲ್ಲ ಅನ್ನೋದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


