ಬೆಂಗಳೂರು: ಪ್ರಿಯಕರನಿಗಾಗಿ (Lover) ಗಂಡನನ್ನೇ ಮನೆ ಬಿಡಿಸಿದ್ದ ಪತ್ನಿ, ಕೊನೆಗೆ ಸುಪಾರಿ ಕೊಟ್ಟು ಪ್ರಿಯಕರನನ್ನೇ ಹತ್ಯೆ ಮಾಡಿದ್ದಾಳೆ. ಬಳಿಕ ಬೈಕ್‌ನಲ್ಲಿ ಕಿಲೋಮೀಟರ್ ದೂರ ಮೃತದೇಹ ಸಾಗಿಸಿ ಪೊಲೀಸರಿಂದ ಬಚಾವ್ ಆಗಲು ಪ್ಲಾನ್ ಮಾಡಿದ್ದ ಖತರ್ನಾಕ್ ದಂಪತಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಹೊಸ ವರ್ಷದ ಮಾರನೇ ದಿನವೇ (ಜನವರಿ 2) ಪತಿ-ಪತ್ನಿ ಇಬ್ಬರೂ ಕೊಲೆ ಮಾಡಿ ಗುರುತು ಪತ್ತೆ ಆಗದಂತೆ ಮಾಡಿ, ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹಾರಿದ್ದಾರೆ. ಆದ್ರೆ ಪೊಲೀಸರಿಂದ ಬಚಾವ್ ಆಗಿ ಹೋದ್ವಿ ಅಂದುಕೊಂಡು ಶಿವಮೊಗ್ಗ ಸುತ್ತುತ್ತಿದ್ದವರನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು (Electronic City Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ರೀನಾ ಹಾಗೂ ಕೊಲೆಯಾದ ನಿಬಾಶೀಶ್ ಪಾಲ್ ನಡುವೆ ಅಕ್ರಮ ಸಂಬಂಧ ಇತ್ತು. ಹೆಂಡತಿಯ ಅಕ್ರಮ ಸಂಬಂಧ ಆಟ ನೋಡಲಾರದೇ ಪತಿ ಸ್ವಂತ ಊರು ಉತ್ತರಪ್ರದೇಶಕ್ಕೆ ಹೋಗಿದ್ದ. ಆ ನಂತರ ಹಣದ ಆಸೆಗೆ ಬಿದ್ದ ಮೃತ ನಿಬಾಶೀಶ್ ಪಾಲ್ ರೀನಾಳನ್ನ ವೇಶ್ಯಾವಾಟಿಕೆ ಮಾಡಿ ಹಣ ತಂದುಕೊಡುವಂತೆ ಪೀಡಿಸುತ್ತಿದ್ದ, ಚಿತ್ರಹಿಂಸೆ ಕೊಡಲು ಶುರು ಮಾಡಿದ್ದ. ಇದನ್ನೂ ಓದಿ: 15 ವರ್ಷದಿಂದ ಮನೆಗಳ್ಳತನ – ಫಿಂಗರ್ ಫ್ರಿಂಟ್‌ನಿಂದ ತಗಲಾಕಿಕೊಂಡ ಖತರ್ನಾಕ್ ನೇಪಾಳಿ ಗ್ಯಾಂಗ್ಪ್ರಿಯಕರನ ಕಿರುಕುಳ ತಾಳಲಾರದೇ ರೀನಾ ತನ್ನ ಗಂಡನನ್ನ ಉತ್ತರಪ್ರದೇಶದಿಂದ ಕರೆಸಿಕೊಂಡು ಪಾಲ್ ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾಳೆ. ಮೊದಲೇ ಕುದಿಯುತ್ತಿದ್ದ ಪತಿ ಗಂಗೇಶ್ ಹೆಂಡತಿಯೊಂದಿಗೆ ಸೇರಿ ಸೀರೆಯನ್ನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದೇ ಹಾಗೆ ಮಾಡಲು ಸ್ನೇಹಿತ ಬಿಜೋಯಿಸ್ ಸಹಾಯದಿಂದ ಹೆಣವನ್ನು ಬೈಕ್‌ನಲ್ಲಿ ಇಟ್ಟುಕೊಂಡು ಕಿಲೋಮೀಟರ್ ದೂರ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ.ಬೈಕ್ ಮಧ್ಯದಲ್ಲಿ ಹೆಣ ಇಟ್ಟುಕೊಂಡು ಸಾಗಿಸೋ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪಬ್ಲಿಕ್ ಟಿವಿಗೆ (Public TV) ಲಭ್ಯವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಗುಜರಿ ಸೇರುವ ಬಸ್‍ಗಳಿಂದ ಬಿಎಂಟಿಸಿಗೆ ಕೋಟಿ ಕೋಟಿ ರೂ. ಆದಾಯಘಟನೆ ಸಂಬಂಧ ದಂಪತಿ ರೀನಾ, ಗಂಗೇಶ್, ಸ್ನೇಹಿತ ಬಿಜೋಯ್‌ನನ್ನ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


