ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಕೋಲಾರದಿಂದ (Kolara) ಸ್ಪರ್ಧಿಸುವ ಬಗ್ಗೆ ಸೋಮವಾರ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕೋಲಾರ ಭೇಟಿ ನೀಡಲಿದ್ದಾರೆ. ಕೋಲಾರದಿಂದ ಸ್ಪರ್ಧೆ ಮಾಡ್ತಾರೆ ಎಂಬ ವದಂತಿ ಹಬ್ಬಿದ ನಂತರ ಎರಡನೆ ಬಾರಿಗೆ ಸಿದ್ದರಾಮಯ್ಯ ಕೋಲಾರ ಭೇಟಿಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ದಳಪತಿಗಳ ಖೆಡ್ಡಾ – ಮಾಜಿ ಸಿಎಂ ಸೋಲಿಸಲು ಹೆಚ್‍ಡಿಕೆ ಶಪಥಸಿದ್ದರಾಮಯ್ಯ ನಾಳೆಯ ಭೇಟಿ ಸಾಕಷ್ಟು ಮಹತ್ವದ್ದಾಗಿದೆ. ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇನಾದರು ಸ್ಪರ್ಧೆಯ ಬಗ್ಗೆ ನಾಳೆಯ ಭೇಟಿ ಸಂದರ್ಭದಲ್ಲಿ ಘೋಷಣೆ ಮಾಡಿದರೆ ಕೋಲಾರ ಅಖಾಡ ರಂಗೇರುವುದು ಗ್ಯಾರಂಟಿ.ಸೋಮವಾರ ಮಧ್ಯಾಹ್ನ 12:30ಕ್ಕೆ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ, ಆನಂತರ ಮಿನಿ ಕ್ರೀಡಾಂಗಣದಲ್ಲಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಯ ಘೋಷಣೆ ಮಾಡಬಹುದು ಅನ್ನೋದು ಕೋಲಾರ ಜಿಲ್ಲಾ‌ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆಯಾಗಿದೆ. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


