ಬೆಳಗಾವಿ: ಬುಲೆಟ್ ತಗುಲಿದ ಹಿಂದೂಪರ ಸಂಘಟನೆ ಮುಖಂಡ (Hindu Organisation Leader) ರವಿ ಕೋಕಿತಕರ್ (Ravi Kokitkar) ಆರೋಗ್ಯವಾಗಿದ್ದಾರೆ. ಯಾರೂ ಗಾಬರಿ ಪಡಬಾರದು. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಶಾಂತಿಯಿಂದ ಇರಬೇಕು ಎಂದು ಆಸ್ಪತ್ರೆ ಬಳಿ ಜಮಾವಣೆಗೊಂಡ ಹಿಂದೂಪರ ಕಾರ್ಯಕರ್ತರಿಗೆ ಶಾಸಕ ಅಭಯ್ ಪಾಟೀಲ್ ಸಲಹೆ ನೀಡಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ (Belagavi) ಇಂತಹ ಘಟನೆ ಮೊದಲ ಬಾರಿ ನಡೆದಿದೆ. ಹಿಂದೂತ್ವವಾದಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಗಂಭೀರವಾದ ವಿಷಯವಾಗಿದೆ. ಇಂದು ಅವರದ್ದೇ ಸಂಘಟನೆಯಿಂದ ದೊಡ್ಡ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಎರಡು ಮೂರು ವಿಷಯಗಳು ಕಾರ್ಯಕರ್ತರಲ್ಲಿ ಚರ್ಚೆ ಆಗುತ್ತಿವೆ. ಒಂದು ಆ ಕಾರ್ಯಕ್ರಮ ಆಗಬಾರದು ಅಂತಾ ಇರಬಹುದು. ರವಿ ಕೋಕಿತಕರ್ ಸಂಘಟನೆಯಲ್ಲಿ ಮುಂದುವರಿಯಬಾರದು ಎಂಬ ಉದ್ದೇಶವಿರಬಹುದು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರು ಶೀಘ್ರ ಬಂಧನ ಆಗಬೇಕು ಅಂತಾ ಹೇಳಿದ್ದೇನೆ. ರವಿ ಕೋಕಿತಕರ್, ಅವರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಿಯುತವಾಗಿ ಕಾರ್ಯಕ್ರಮ ನಡೆಯಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಯಾರೂ ಸಹ ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


