ಬೆಂಗಳೂರು: ಮುಂದಿನ ವರ್ಷದಿಂದ 2 ದಿನಗಳ ಕಾಲ ಚಿತ್ರಸಂತೆ (Chitrasanthe) ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಚಿತ್ರಕಲಾ ಪರಿಷತ್‌ಗೆ (Chitrakala Parishath) ಸಲಹೆ ನೀಡಿದ್ದಾರೆ. 20ನೇ ಚಿತ್ರಸಂತೆ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ, ಆಯೋಜಕರಿಗೆ 2 ದಿನ ಸಂತೆ ಆಯೋಜನೆಗೆ ಸೂಚನೆ ಕೊಟ್ಟಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ. ಮನದಾಳದ ಮಾತುಗಳು ಮತ್ತು ಭಾವನೆಗಳನ್ನು ಚಿತ್ರಕಲೆ ಮೂಲಕ ವ್ಯಕ್ತಪಡಿಸಲಾಗುತ್ತದೆ. ಚಿತ್ರಕಲೆ ತಿಳಿದುಕೊಳ್ಳುವ ಪ್ರಯತ್ನ ಸಾರ್ವಜನಿಕರು ಮಾಡಬೇಕು. ಚಿತ್ರಕಲಾ ಪರಿಷತ್ತು ಕೆಲಸ ಒಳ್ಳೆಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಾಮಾನ್ಯ ಜನರಲ್ಲಿ ಚಿತ್ರಕಲೆ ಅಭಿಪ್ರಾಯ ಮೂಡಿಸಬೇಕು ಎಂದು ಸಲಹೆ ನೀಡಿದರು.ಇಂತಹ ಚಿತ್ರಕಲಾ ಪರಿಷತ್ತು ವಿಶ್ವದಲ್ಲೇ ಮತ್ತೊಂದು ಇಲ್ಲ. ಚಿತ್ರಕಲಾ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ. ಚಿತ್ರಸಂತೆ ಆಗಲೇ ಬೇಕಾಗಿರುವ ಸಂತೆ. ಇದು ಬೆಳೆಯಬೇಕು. ಇಲ್ಲಿ ಡಿಗ್ರಿ ಆದ ತಕ್ಷಣ ನೌಕರಿ ತೆಗೆದುಕೊಳ್ಳೊದಿಲ್ಲ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಸ್ಥೆ ಇದು ಎಂದು ಹೊಗಳಿದರು. ಇದನ್ನೂ ಓದಿ: ಮೋದಿ, ಅಮಿತ್ ಶಾ ಕಂಡ್ರೆ ನಮಗಲ್ಲ, ಡಿಕೆಶಿಗೆ ಭಯ: ಆರ್. ಅಶೋಕ್ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆರಂಭವಾದ ಚಿತ್ರಸಂತೆಗೆ ಬಾತುಕೋಳಿಯ ಚಿತ್ರವನ್ನು ಬಿಡಿಸುವ ಮೂಲಕ ಉದ್ಘಾಟಿಸಿ, ಚಾಲನೆ ನೀಡಿದೆನು. ಚಿತ್ರಕಲೆ ಒಂದು ವಿನೂತನ ವಿದ್ಯೆಯಾಗಿದ್ದು, ಅದನ್ನು ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಚಿತ್ರಕಲಾ ಪರಿಷತ್ ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ. pic.twitter.com/81Zd2dcRRl— Basavaraj S Bommai (@BSBommai) January 8, 2023ಚಿತ್ರಕಲೆ ಎನ್ನುವುದು ಸರಸ್ವತಿ ವಾಹನ ಪರಮಹಂಸ ಇದ್ದ ಹಾಗೆ. ಈ ಸಂಸ್ಥೆ ಹಿಮಾಲಯದ ಎತ್ತರಕ್ಕೆ ಬೆಳೆಯಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ಈ ವರ್ಷ 4-5 ಭಾಗಗಳಲ್ಲಿ ಚಿತ್ರ ಸಂತೆ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ತಿಳಿಸಿದರು.ಈ ಚಿತ್ರಸಂತೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಬೇಕು. ಬ್ರ್ಯಾಂಡ್ ಬೆಂಗಳೂರನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಚಿತ್ರಕಲಾ ಪರಿಷತ್ತ್ಗೆ ತೆಗೆದುಕೊಂಡು ಹೋಗಬೇಕು. ಮುಂದಿನ ವರ್ಷದಿಂದ ಶನಿವಾರ ಮತ್ತು ಭಾನುವಾರ 2 ದಿನ ಚಿತ್ರಸಂತೆ ನಡೆಸುವಂತೆ ಸಿಎಂ ಆಯೋಜಕರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


