ಮಂಡ್ಯ: ನಾಟಕ (Drama) ಮಾಡುವ ವೇಳೆಯೇ ಕಲಾವಿದನೊಬ್ಬ (Artist) ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.ದುಗ್ಗನಹಳ್ಳಿ ಗ್ರಾಮದ ನಂಜಯ್ಯ (46) ಮೃತ ಕಲಾವಿದ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಾಟಕ ನಡೆಯುತ್ತಿತ್ತು. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕದ ವೇಳೆಯಲ್ಲಿ ಸಾರ್ಥ್ಯಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನನಂಜಯ್ಯನಿಗೆ ಅಲ್ಲೇ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಾವಿದನ ಸಾವಿನ ನಂತರ ಸಹ ಕಲಾವಿದರು, ಗ್ರಾಮಸ್ಥರು ನಾಟಕ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


