ಕಲಬುರಗಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಸಹೋದರ ಚನ್ನವೀರ ಪಾಟೀಲ್ ಅವರ ಮೇಲೆ ಐದಾರು ದುಷ್ಕರ್ಮಿಗಳಿಂದ ಏಕಕಾಲಕ್ಕೆ ಗುಂಡಿನ ದಾಳಿ (Firing) ನಡೆದಿದೆ.ಕಲಬುರಗಿ (Kalaburagi) ನಗರದ ಆಳಂದ ಚೆಕ್‌ಪೋಸ್ಟ್ ಬಳಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಚನ್ನವೀರ ಪಾಟೀಲ್ ಕೈಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಲೇರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಚನ್ನವೀರ ಪಾಟೀಲ್ ಹಾಗೂ ಜೊತೆಗಿದ್ದ ಹುಡುಗನ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡದಿದ್ರೆ ಕೇಂದ್ರ ಸಚಿವರಿಗೆ ಘೇರಾವ್‌ ಹಾಕ್ತೇವೆ: ಡಿಕೆ ಸುರೇಶ್‌ ಎಚ್ಚರಿಕೆದುಷ್ಕರ್ಮಿಗಳು ಬುಲೇರೋ ವಾಹನದಲ್ಲಿ ಚಾಕು, ಕಲ್ಲು ಸಂಗ್ರಹಿಸಿಕೊಂಡು ಬಂದಿದ್ದರು. ಏಕಕಾಲದಲ್ಲಿ ಐದಾರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ. ಚನ್ನವೀರ ಪಾಟೀಲ್ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ ಸಹೋದರನಾಗಿದ್ದು, ಸ್ಥಳಕ್ಕೆ ನಗರ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಜಸ್ಟ್ ಫನ್‍ಗಾಗಿ ಬಾಂಬ್ ಬೆದರಿಕೆ ಹಾಕಿದ್ದೆ – ಪೊಲೀಸರ ಮುಂದೆ ಅಪ್ರಾಪ್ತ ಬಾಲಕ ಹೇಳಿಕೆಕಲಬುರಗಿ ನಗರದ ಸಬ್ ಅರ್ಬನ್‌ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


