ಮೈಸೂರು: ಈ ಬಾರಿಯ ಗಣರಾಜೋತ್ಸವ (Republic Day 2023) ಪರೇಡ್‍ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ಕೊಡಲಾಗುತ್ತದೆ. ಈ ವರ್ಷವೂ ಭಾಗವಹಿಸಲು ಅವಕಾಶ ಕೊಡಿ ಅಂತ ಕೇಳುತ್ತೇವೆ. ಈ ವರ್ಷವೂ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗಲಿದೆ ಎಂದರು.ಕೇಂದ್ರದ ವಿರುದ್ಧ ಆಕ್ರೋಶ: ಕಳೆದ 13 ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಈ ಬಾರಿ ಮನ್ನಣೆ ನೀಡಿಲ್ಲ. ಈಗ 13 ವರ್ಷಗಳ ಬಳಿಕ ಕರ್ನಾಟಕ ಅವಕಾಶ ಕಳೆದುಕೊಂಡಿದ್ದು, ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಪ್ರತಿಬಾರಿ ರಾಜ್ಯದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಹಲವು ಬಾರಿ ರಾಜ್ಯ ತಂಡ ಪ್ರಶಸ್ತಿಯನ್ನೂ ಗೆದ್ದಿತ್ತು. ಆದ್ರೀಗ ರಾಜ್ಯವನ್ನು ಕಡೆಗಣಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶಈ ಬಾರಿ ಕರ್ನಾಟಕ ಸರ್ಕಾರ ಸಿರಿಧಾನ್ಯ ರೇಷ್ಮೆ, ನಾರಿಶಕ್ತಿ ಸೇರಿ ನಾಲ್ಕು ವಿಷಯಗಳನ್ನ ಕೊಟ್ಟಿತ್ತು. ಅದರಲ್ಲಿ ನಾರಿಶಕ್ತಿ ಥೀಮ್ ಗೆ ಮೆಚ್ಚುಗೆ ವ್ಯಕ್ತವಾಗಿ ಅವಕಾಶ ಕೊಡುವ ಸಾಧ್ಯತೆ ಇತ್ತು. ಆದರೆ ಕೇಂದ್ರದಿಂದ ರಾಜ್ಯದ ಸ್ತಬ್ದ ಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದ್ರೆ ನೆರೆಯ ರಾಜ್ಯದ ತಮಿಳುನಾಡು (Tamilnadu) ಮತ್ತು ಕೇರಳ (Kerala) ಕ್ಕೆ ಈ ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಗಣರಾಜ್ಯೋತದಲ್ಲಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ಕೊಡಲಾಗಿದ್ದು ರಾಜ್ಯಕ್ಕೆ ಮಾತ್ರ ಮಣೆ ಹಾಕಿಲ್ಲ. ಇದನ್ನೂ ಓದಿ: ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡದಿದ್ರೆ ಕೇಂದ್ರ ಸಚಿವರಿಗೆ ಘೇರಾವ್‌ ಹಾಕ್ತೇವೆ: ಡಿಕೆ ಸುರೇಶ್‌ ಎಚ್ಚರಿಕೆಕಳೆದ ವರ್ಷ ನಾರಾಯಣಗುರು ಸ್ತಬ್ಧಚಿತ್ರ (Narayanaguru Tableau) ಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ನಾರಾಯಣಗುರು ಅನುಯಾಯಿಗಳ ಕೆಂಗಣ್ಣಿಗೆ ಕೇಂದ್ರ ಸರ್ಕಾರ ಗುರಿಯಾಗಿತ್ತು. ಈಗ ರಾಜ್ಯದ ಸ್ತಬ್ಧ ಚಿತ್ರವನ್ನೇ ರಿಜೆಕ್ಟ್ ಮಾಡುವ ಮೂಲಕ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ಚುನಾವಣಾ ವರ್ಷದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೆ ಕಾದುನೋಡಬೇಕು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


