ಬೆಂಗಳೂರು: ಹಾವೇರಿ (Haveri) ಜಿಲ್ಲೆಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಪರ್ಯಾಯವಾಗಿ ಭಾನುವಾರ (ಜ.8) ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ (Janasahitya Sammelana) ನಡೆಸಲಾಗುವುದು ಎಂದು ದೆಹಲಿಯ ಜೆಎನ್‌ಯು ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ (Purushottama Bilimale) ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಕೆ.ಆರ್‌. ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್‌ ಆವರಣದಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ, ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ: ಬೊಮ್ಮಾಯಿಈಗಿನ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಸಾಹಿತಿಗಳಲ್ಲ, ಸಾಹಿತ್ಯ ಸಂಘಟಕರೂ ಅಲ್ಲ. ಸರ್ಕಾರ ಅನುದಾನ ಕೊಡುತ್ತೆ ಅಂತಾ ಯಾವುದೇ ಸಂಸ್ಥೆಗಳು ಅಡಿಯಾಳು ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈಗಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಕೋಮುವಾದಿ. ಅದು ಸರ್ಕಾರಕ್ಕೆ ಕೂಡ ಬೇಕಾಗಿದೆ. ಮಹೇಶ್ ಜೋಷಿ ಕೋಮುವಾದಿ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನ ಇವತ್ತಿನ ಕಾರ್ಯಕ್ರಮದಲ್ಲಿ ಮಹೇಶ್ ಜೋಷಿ ಮಗಳ ಡ್ಯಾನ್ಸ್ ಇದೆ. ಮಾನಸ ಜೋಷಿ ಡ್ಯಾನ್ಸ್‌ಗೆ ಅವಕಾಶ ಕೊಟ್ಟಿದ್ದಾರೆ. ಅಧ್ಯಕ್ಷರು ಅವರೇ ಆಗಿರುವಾಗ ಮಗಳಿಗೆ ಅವಕಾಶ ಕೊಡ್ತಾರೆ. ಹೀಗೆ ಹಲ್ಲು ಕಿರಿದುಕೊಂಡು ಸರ್ಕಾರದ ಪಾದದಡಿಯಲ್ಲಿ ಸಂಸ್ಥೆಯನ್ನು ಇಡೋದು ಸರಿಯಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಳಸಾ ಬಂಡೂರಿ – ಇನ್ನೂ 60 ದಿನಗಳಲ್ಲಿ ಒಳ್ಳೆ ಸುದ್ದಿ‌ ಕೊಡ್ತೇವೆ: ಮುನೇನಕೊಪ್ಪಬೆಂಗಳೂರಿನ ಸಮಾವೇಶದ ಬಳಿಕ ಉತ್ತರ ಕರ್ನಾಟಕದಲ್ಲಿಯೂ ಸಮಾವೇಶ ಮಾಡುತ್ತೇವೆ. ಜಿಲ್ಲಾವಾರು ಸಮಾವೇಶಗಳನ್ನು ಆಯೋಜನೆ ಮಾಡಲಿದ್ದೇವೆ. ಪ್ರಭುತ್ವವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಆದ್ರೇ ಇದು ಈಗ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


